ಹೊಸದಿಗಂತ ವರದಿ, ವಿಜಯಪುರ:
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸಿ ಬಂಧನಗೊಂಡಿದ್ದ 6 ಜನರು ಬುಧವಾರ ಬಿಡುಗಡೆಗೊಂಡಿದ್ದು, ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದರು.
ಜ. 1 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನಗರದ ಸೊಲ್ಲಾಪುರ ರಸ್ತೆ ಬಳಿಯ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಹೋರಾಟಗಾರರು ಯತ್ನಿಸಿದಾಗ ನಡೆದ ತಳ್ಳಾಟದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ 27 ಜನ ಹೋರಾಟಗಾರ ಮೇಲೆ ಪ್ರಕರಣ ದಾಖಲಾಗಿ ಜೈಲು ಸೇರಿದ್ದ, ಹೋರಾಟಗಾರರಾದ ಸಂಗನಬಸವೇಶ್ವರ ಸ್ವಾಮೀಜಿ, ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಬಿ.ಭಗವಾನ್ ರೆಡ್ಡಿ, ಭೋಗೇಶ ಸೊಲ್ಲಾಪುರ, ಸಿದ್ದರಾಮ ಹಳ್ಳೂರ ಅವರು ಬಿಡುಗಡೆಗೊಂಡರು.
ಈ ಸಂದರ್ಭ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರರು ಇದ್ದರು.


