ಹೊಸದಿಗಂತ ಡಿಜಿಟಲ್ ಡೆಸ್ಕ್;
ದೆಹಲಿಯ ನಿವಾಸಿಯೊಬ್ಬರು ಇತ್ತೀಚೆಗೆ ಮಧ್ಯರಾತ್ರಿಯಲ್ಲಿ ಝೊಮ್ಯಾಟೋದಲ್ಲಿ ಆಹಾರ ಆರ್ಡರ್ ಮಾಡಿದ್ದಾರೆ. ಬಳಿಕ ಜೊಮ್ಯಾಟೋ ರೈಡರ್, ಗ್ರಾಹಕನಿಗೆ ಕರೆ ಮಾಡಿ ಆಹಾರದ ಆರ್ಡರ್ ಬಂದು ಸ್ವೀಕರಿಸುವಂತೆ ಕರೆ ಮಾಡಿದ್ದಾನೆ.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾತು ಬೆಳೆದು ಫೋನಿನಲ್ಲಿಯೇ ಇಬ್ಬರೂ ಜಗಳವಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಝೊಮ್ಯಾಟೋ ಡೆಲಿವರಿ ರೈಡರ್, ತಾನೇ ಆ ಆಹಾರ ಪೊಟ್ಟಣವನ್ನು ಓಪನ್ ಮಾಡಿ ಅದರಲ್ಲಿದ್ದ ಗುಲಾಬ್ ಜಾಮೂನ್ ಹಾಗೂ ಬಿರಿಯಾನಿ ತಂದು ಅದರ ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾನೆ.
ಮಧ್ಯರಾತ್ರಿ ಆರ್ಡರ್ ಮಾಡಲಾಗಿದ್ದ ಆಹಾರವು ಕೆಲವೇ ನಿಮಿಷಗಳಲ್ಲಿ ಗ್ರಾಹಕರ ಮನೆಯ ಬಳಿ ಬಂದಿದೆ. ಆಗ ಸುಮಾರು 2:30 ಸಮಯ. ಗ್ರಾಹಕನ ಮನೆ ಮೊದಲ ಅಂತಸ್ತಿನಲ್ಲಿತ್ತು. ಅದೇ ಕಾರಣಕ್ಕಾಗಿ, ಡೆಲಿವರಿ ಏಜೆಂಟ್ ಅಂಕುರ್ ಠಾಕೂರ್, ಗ್ರಾಹಕನಿಗೆ ಕರೆ ಮಾಡಿ ಆಹಾರ ಕೊಂಡೊಯ್ಯುವಂತೆ ಕೇಳಿದ್ದಾರೆ. ಅದಕ್ಕೆ ಗ್ರಾಹಕ ಒಪ್ಪಿಲ್ಲ. ‘ನಾನು ಮನೆ ಬಾಗಲಿಗೆ ತಂದು ಆಹಾರ ಡೆಲಿವರಿ ನೀಡುವುದಕ್ಕಾಗಿ ಹಣ ಪಾವತಿಸಿದ್ದೇನೆ. ಆದರೂ, ನೀವೇಕೆ ಅಲ್ಲಿಯೇ ನಿಂತು ನನ್ನನ್ನು ಕೆಳಕ್ಕೆ ಕರೆಯುತ್ತಿದ್ದೀರಿ. ನೀವೇ ಬಂದು ಮನೆಗೆ ಬಾಗಿಲಿಗೆ ಫುಡ್ ಡೆಲಿವರಿ ಕೊಡಿ” ಎಂದಿದ್ದಾರೆ. ಅದಕ್ಕೆ ಡೆಲಿವರಿ ಹುಡುಗ, “ತಂಬಾ ದೂರದಿಂದ ರಾತ್ರಿಯ ಈ ಚಳಿಯಲ್ಲಿ ಬಂದಿದ್ದೇನೆ. ಸುಸ್ತಾಗಿದೆ, ನೀವೇ ಬಂದು ಆಹಾರ ತೆಗೆದುಕೊಂಡು ಹೋಗಿ” ಎಂದು ಹೇಳಿದ್ದಾನೆ.
ಅದಕ್ಕೆ ಉತ್ತರಿಸಿದ ಗ್ರಾಹಕ , ಅದೆಲ್ಲಾ ಆಗಲ್ಲ. ಡೆಲಿವರಿ ಚಾರ್ಜಸ್ ಪಡೆದಿರುವುದಿಂದ ಏನೇ ಕಷ್ಟವಾದರೂ ನೀವೇ ಬಂದು ಆಹಾರದ ಪೊಟ್ಟಣವನ್ನು ನನಗೆ ಕೊಡಬೇಕು ಎಂದು ಹಠ ಹಿಡಿದಿದ್ದಾನೆ. ಇದರಿಂದ ಇಬ್ಬರಿಗೂ ಫೋನಿನಲ್ಲೇ ವಾಗ್ಯುದ್ಧವಾಗಿದೆ.
ಸಿಟ್ಟಿಗೆದ್ದ ಆ ಗ್ರಾಹಕ, ಬಾಲ್ಕನಿಯಿಂದಲೇ ಆರ್ಡರ್ ತಂದು ಕೊಡೋ ಹಾಗಿದ್ದರೆ ಮನೆ ಬಾಗಿಲಿಗೆ ತಂದುಕೊಡು. ಇಲ್ಲವಾದರೆ ಆರ್ಡರ್ ಕ್ಯಾನ್ಯಲ್ ಮಾಡಿಕೋ ಎಂದು ಬಾಲ್ಕನಿಯಿಂದ ಕೂಗಿ ಹೇಳಿದ್ದಾನೆ.
ಅದರಿಂದ ಸಿಟ್ಟಿಗೆದ್ದ ಝೊಮ್ಯಾಟೋ ಡೆಲಿವರಿ ಬಾಯ್, ಆರ್ಡರ್ ಕ್ಯಾನ್ಸಲ್ ಮಾಡಿದ್ದು, ಜೊತೆಗೆ, ಆ ಆರ್ಡರ್ ಅನ್ನು ಅಲ್ಲಿಯೇ ಓಪನ್ ಮಾಡಿ ಸೇವಿಸಿದ್ದಾನೆ.
ತಾನು ಆರ್ಡರ್ ಓಪನ್ ಮಾಡಿ ಆಹಾರ ಸೇವಿಸಿದ್ದನ್ನು ವಿಡಿಯೋ ಮಾಡಿರುವ ಆತ, ‘ನಾನು ಆಹಾರ ಆರ್ಡರ್ ಕ್ಯಾನ್ಸಲ್ ಮಾಡಿದ್ದು ಮಾತ್ರವಲ್ಲ. ಆ ಆಹಾರವನ್ನು ಇಲ್ಲಿಯೇ ತಿನ್ನುತ್ತಿದ್ದೇನೆ ಎಂದು ಆ ಆಹಾರದ ಪಾರ್ಸಲ್ ನಲ್ಲಿದ್ದ ಗುಲಾಬ್ ಜಾಮೂನ್ ಹಾಗೂ ಬಿರಿಯಾನಿ ತಿಂದು ಖಾಲಿ ಮಾಡಿದ್ದಾನೆ. ಅದರ ವಿಡಿಯೋವನ್ನು ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಾಕಿದ್ದಾನೆ.
ಇದಕ್ಕೆ ಹಲವಾರು ಕಮೆಂಟ್ಸ್ ಗಳು ಬಂದಿವೆ. ಹಲವಾರು ಮಂದಿ, ಡೆಲಿವರಿ ಬಾಯ್ ವಿರುದ್ಧವೇ ಕಮೆಂಟ್ ಮಾಡಿದ್ದಾರೆ.
ಒಬ್ಬರು ತಮ್ಮ ಕಮೆಂಟ್ ನಲ್ಲಿ,’ಗ್ರಾಹಕರು ಡೆಲಿವರಿ ಚಾರ್ಜ್ ಹಾಕಿದ್ದರೂ ನೀವು ಅದನ್ನು ಸರಿಯಾಗಿ ಪೂರೈಸುವುದಿಲ್ಲ. ಮನೆ ಬಾಗಿಲಿಗೆ ಹೋಗಿ ಆಹಾರ ಡೆಲಿವರಿ ಮಾಡುವುದು ನಿಮ್ಮ ಕರ್ತವ್ಯ’ ಎಂದಿದ್ದಾರೆ.
ಕೆಲವರು, ‘ದೂರದಿಂದ ಬಂದು ಸುಸ್ತಾಗಿದ್ದರೆ ಸ್ವಲ್ಪ ಸುಧಾರಿಸಿಕೊಂಡು ಆಹಾರ ಮೇಲಕ್ಕೆ ಕೊಂಡೊಯ್ಯಬಹುದಿತ್ತು. ಹೀಗೆ ವಾದ ಮಾಡಿದ್ದಲ್ಲದೆ, ಆಹಾರವನ್ನು ಅಲ್ಲೇ ತಿಂದು ಉದ್ಧಟತನ ತೋರಿದ್ದು ಸರಿಯಲ್ಲ’ಎಂದಿದ್ದಾರೆ.


