ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದೆಲ್ಲೆಡೆ ಸಂಕ್ರಾಂತಿ ಸಂಭ್ರಮ ಆರಂಭವಾಗಿದ್ದು, ಜನ ಹೂವು, ಹಣ್ಣು, ಕಬ್ಬು, ಅವರೆಕಾಯಿ, ಶೇಂಗಾ, ಗೆಣಸಿನ ಖರೀದಿಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ರಾಶಿ ರಾಶಿ ಜನ ಕಂಡುಬಂದಿದ್ದು, ಮಾರುಕಟ್ಟೆ ತುಂಬಿದಂತೆ ಕಂಡುಬಂದಿದೆ. ವರ್ಷದ ಮೊದಲ ಹಬ್ಬವನ್ನು ಬೆಂಗಳೂರಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಹೂ, ಕಬ್ಬು, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಜೊತೆಗೆ ರೆಡಿಮೆಡ್ ಎಳ್ಳು-ಬೆಲ್ಲಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಗಗನಕ್ಕೇರಿರೋ ಹೂವಿನ ದರ ಕಂಡು ಗ್ರಾಹಕರು ಕಂಗಾಲಾಗಿದ್ದಾರೆ. ಆದರೂ ಅಗತ್ಯಕ್ಕೆ ತಕ್ಕಷ್ಟಕ್ಕಿಂತ ಸ್ವಲ್ಪ ಕಡಿಮೆ ತೆಗೆದುಕೊಂಡು ಹೋಗಿ ಹಬ್ಬ ಮಾಡುತ್ತಿದ್ದಾರೆ.
ಸಂಕ್ರಾಂತಿ ಹಬ್ಬದ ಶುಭಾಷಯಗಳು. ಈ ಹಬ್ಬ ಎಲ್ಲರಿಗೂ ಸುಖ, ಸಂತೋಷ, ಶಾಂತಿ ಹಾಗೂ ನೆಮ್ಮದಿಯನ್ನು ತರಲಿ. ಹಬ್ಬದ ದಿನ ಇರುವಷ್ಟು ಸಂಭ್ರಮ ವರ್ಷದ ಪ್ರತಿ ದಿನವೂ ಇರಲಿ ಎಂದು ಟೀಂ ಹೊಸದಿಗಂತ ಹಾರೈಸುತ್ತದೆ.


