January15, 2026
Thursday, January 15, 2026
spot_img

Viral | ಪಂದ್ಯ ನಡೆಯೋವಾಗ ಮೈದಾನಕ್ಕೆ ಎಂಟ್ರಿ ಕೊಟ್ಟ ಅಭಿಮಾನಿ: ಏನೂ ಮಾಡ್ಬೇಡಿ…ಕೊಹ್ಲಿ ಪ್ರೀತಿಗೆ ಮನಸೋತ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ನಿರಂಜನ್ ಶಾ ಮೈದಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. ಭದ್ರತಾ ವ್ಯವಸ್ಥೆಯನ್ನು ತಪ್ಪಿಸಿಕೊಂಡ ಯುವಕನೊಬ್ಬ ಮೈದಾನಕ್ಕೆ ನುಗ್ಗಿ ನೇರವಾಗಿ ವಿರಾಟ್ ಕೊಹ್ಲಿಯತ್ತ ಓಡಿಬಂದಿದ್ದಾನೆ. ಅಭಿಮಾನಿಯ ಉತ್ಸಾಹಕ್ಕೆ ಮಿತಿ ಇಲ್ಲದಂತೆ, ಆತ ಕೊಹ್ಲಿಯನ್ನು ತಬ್ಬಿಕೊಳ್ಳುವ ಮೂಲಕ ತನ್ನ ಪ್ರೀತಿ ವ್ಯಕ್ತಪಡಿಸಿದ್ದಾನೆ.

ಘಟನೆ ನಡೆದ ತಕ್ಷಣವೇ ಭದ್ರತಾ ಸಿಬ್ಬಂದಿ ಮೈದಾನಕ್ಕೆ ಧಾವಿಸಿದರು. ಆದರೆ ಅಭಿಮಾನಿಯನ್ನು ವಶಕ್ಕೆ ಪಡೆಯುವ ಮುನ್ನ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ, ಆತನಿಗೆ ಯಾವುದೇ ಹಾನಿ ಮಾಡಬಾರದೆಂದು ಸಿಬ್ಬಂದಿಗೆ ಮನವಿ ಮಾಡಿದರು. ಅಭಿಮಾನಿಯ ಭಾವನೆಗೆ ಗೌರವ ತೋರಿದ ಕೊಹ್ಲಿಯ ಈ ಮಾನವೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದ್ದು, ಸಂಬಂಧಿತ ವಿಡಿಯೋ ಭಾರೀ ವೈರಲ್ ಆಗಿದೆ.

ಪಂದ್ಯದ ಫಲಿತಾಂಶದ ವಿಷಯಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 284 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ತಂಡ 47.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿ ಭರ್ಜರಿ ಜಯ ದಾಖಲಿಸಿತು.

Most Read

error: Content is protected !!