ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಕ್ರಾಂತಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಈ ಬಾರಿ ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು ನೀಡಿ, ಅವುಗಳೊಂದಿಗೆ ಕೆಲಕಾಲ ಕಳೆಯುವ ಮೂಲಕ ಭಾರತೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲಿನ ಗೌರವವನ್ನು ಅವರು ವ್ಯಕ್ತಪಡಿಸಿದ್ದಾರೆ.
ಹಬ್ಬದ ದಿನ ಗೋಸೇವೆಗೆ ಮಹತ್ವ ನೀಡಿರುವುದು ಕೃಷಿ ಹಾಗೂ ಗ್ರಾಮೀಣ ಸಂಸ್ಕೃತಿಯೊಂದಿಗೆ ದೇಶದ ಆಳವಾದ ನಂಟನ್ನು ಪ್ರತಿಬಿಂಬಿಸುತ್ತದೆ. ಗೋವುಗಳನ್ನು ಭಾರತೀಯ ಜೀವನಶೈಲಿಯ ಅವಿಭಾಜ್ಯ ಅಂಗವೆಂದು ಪರಿಗಣಿಸುವ ಸಂಪ್ರದಾಯವನ್ನು ಪ್ರಧಾನಿ ಈ ಮೂಲಕ ಮತ್ತೊಮ್ಮೆ ನೆನಪಿಸಿದ್ದಾರೆ.
ಇದಕ್ಕೂ ಮುನ್ನ ಜನವರಿ 14ರಂದು, ಪೊಂಗಲ್ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಲ್ಲಿಯೂ ಗೋಸೇವೆ ಮಾಡಿದ್ದರು. ತಮಿಳು ಸಂಸ್ಕೃತಿಯ ಪ್ರಮುಖ ಹಬ್ಬವಾಗಿರುವ ಪೊಂಗಲ್ ಸಂದರ್ಭದಲ್ಲಿ ಗೋವುಗಳಿಗೆ ಗೌರವ ಸಲ್ಲಿಸುವುದು ಕೃಷಿಕ ಸಮುದಾಯದ ಮಹತ್ವವನ್ನು ಎತ್ತಿಹಿಡಿಯುತ್ತದೆ.


