January15, 2026
Thursday, January 15, 2026
spot_img

ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ, ಬ್ಯೂಟಿಫುಲ್‌ ಪೋಸ್ಟರ್‌ ಜತೆ ಸಂಕ್ರಾಂತಿ ವಿಶ್‌ ಮಾಡಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡಿಗರ ಹೆಮ್ಮೆಯ ಕ್ರಿಕೆಟ್‌ ಟೀಮ್‌ ಆರ್‌ಸಿಬಿ, ನಾಡಿನ ಸಮಸ್ತ ಜನರಿಗೆ ಶುಭ ಹಾರೈಸಿದೆ. ಎಕ್ಸ್‌ನಲ್ಲಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ನಾಡಿನ ಸಮಸ್ತ ಜನರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಎಂದು ಪೋಸ್ಟ್‌ ಮಾಡಿದೆ.

ಪೋಸ್ಟ್‌ನಲ್ಲಿ ಮಹಿಳಾ ತಂಡದ ಆಟಗಾರರು ಹಾಗೂ ಪುರುಷರು ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಆರ್‌ಸಿಬಿಯ ಹೆಸರು ಹಾಗೂ ಚಿಹ್ನೆ ಹೊತ್ತ ಗಾಳಿಪಟ ಆಕಾಶಕ್ಕೆ ಹಾರುತ್ತಿರುವುದನ್ನು ಡಿಸೈನ್‌ ಮಾಡಲಾಗಿದೆ. ಈ ಮೂಲಕ ಈ ಸಲವು ಕಪ್‌ ನಮ್ಮದೇ ಎಂಬ ಸಂದೇಶ ಕೊಟ್ಟಂತೆ ಕಾಣುತ್ತಿದೆ.

ರಾಜ್ಯದೆಲ್ಲೆಡೆ ಸಂಭ್ರಮದ ಮಕರಸಂಕ್ರಾಂತಿ ಹಬ್ಬದ ಆಚರಣೆ ನಡೆಯುತ್ತಿದೆ. ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಚಿಣ್ಣರು ಎಳ್ಳುಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದಾರೆ.

Most Read

error: Content is protected !!