ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ತಾನು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಘೋಷಣೆ ಮಾಡಿದ್ದಾರೆ.
ಅಭ್ಯರ್ಥಿಗೂ ಆಕಾಂಕ್ಷಿಗೂ ವ್ಯತ್ಯಾಸ ಇದ್ದು, ವ್ಯತ್ಯಾಸ ಗೊತ್ತಿಲ್ಲದೆ ಕೆಲವರು ಮಾತನಾಡ್ತಿದ್ದಾರೆ. ಅಭ್ಯರ್ಥಿ ಯಾರು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ.
ಮುಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ. ಚಾಮರಾಜ ಕ್ಷೇತ್ರದ ಜನ ವಿದ್ಯಾವಂತ ಪ್ರತಿನಿಧಿ ಬಯಸುತ್ತಾರೆ. ವಾಸು, H.S. ಶಂಕರಲಿಂಗೇಗೌಡರ ಹಾದಿಯಲ್ಲಿ ತಾನು ನಡೆಯುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.


