ಹೊಸದಿಗಂತ ವರದಿ ಕಲಬುರಗಿ:
ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ (55) ಗುರುವಾರ ಬೆಳಗಿನ ಜಾವ ನಿಧನರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ಆರ್ಡಿಪಿಆರ್,ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಸ್ವಾಮೀಜಿಗಳು ಬಾಲ್ಯದಿಂದಲೇ ಅಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಂಡಿದ್ದರು. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಬಳಿ ಕನಕಗುರು ಪೀಠ ಸ್ಥಾಪನೆ ಮಾಡಿ ಪೀಠಾಧಿಪತಿಗಳಾದರು. ಆ ಮೂಲಕ ಸಮಾಜಸೇವೆ, ಉಚಿತ ಶಿಕ್ಷಣ, ದಾಸೋಹ, ಸರ್ವಧರ್ಮ ಸಮನ್ವಯತೆ ಮೈಗೂಡಿಸಿಕೊಳ್ಳುವುದರ ಜೊತೆಗೆ ಪ್ರಗತಿಪರ ಚಿಂತನೆಯುಳ್ಳ ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು.
ಅವರ ಸಮಾಜಿಕ ಸೇವೆ, ಸಮಾಜಕ್ಕೆ ಮಾರ್ಗದರ್ಶನ ಮತ್ತಷ್ಟು ಬೇಕಿತ್ತು ಎನ್ನುವ ಸಮಯದಲ್ಲೇ ಶ್ರೀ ಗಳು ಅಕಾಲಿನ ನಿಧನ ಹೊಂದಿದ್ದಾರೆ.
ಶ್ರೀಗಳ ಅಕಾಲಿಕ ನಿಧನದ ಅವರ ಅಪಾರ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ನೋವುಂಟು ಮಾಡಿದೆ. ಅವರ ದುಃಖದಲ್ಲಿ ನಾನೂ ಕೂಡಾ ಭಾಗಿಯಾಗಿದ್ದೇನೆ ಆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


