ಇಡೀ ದಿನದ ಓಡಾಟದ ಬಳಿಕ ರಾತ್ರಿ ಹೊತ್ತಿಗೆ ಮನಸ್ಸು ಮತ್ತು ದೇಹ ಎರಡೂ ವಿಶ್ರಾಂತಿಯನ್ನು ಹುಡುಕುತ್ತವೆ. ಆದರೆ ಇದೇ ಸಮಯದಲ್ಲಿ ನಾವು ಮಾಡುವ ಆಹಾರದ ಆಯ್ಕೆ ಮುಂದಿನ ದಿನದ ಆರೋಗ್ಯದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. “ರಾತ್ರಿ ಊಟ ಮಾಡಲೇಬೇಕಾ?”, “ಚಪಾತಿ ತಿಂದರೆ ತೂಕ ಹೆಚ್ಚುತ್ತಾ?” ಎಂಬ ಪ್ರಶ್ನೆಗಳು ಬಹುತೇಕ ಮನೆಗಳಲ್ಲಿ ಕೇಳಿಬರುತ್ತವೆ. ವಾಸ್ತವವಾಗಿ, ರಾತ್ರಿ ಊಟವನ್ನು ಬಿಡುವುದಕ್ಕಿಂತ ಸರಿಯಾದ ಆಹಾರವನ್ನು ಆಯ್ಕೆ ಮಾಡುವುದು ಹೆಚ್ಚು ಮುಖ್ಯ.
ರಾತ್ರಿ ಊಟ ಮಾಡದೇ ಮಲಗಿದರೆ ದೇಹಕ್ಕೆ ಅಗತ್ಯವಾದ ಶಕ್ತಿ ಸಿಗದೆ, ಬೆಳಿಗ್ಗೆ ತಲೆಸುತ್ತು, ದಣಿವು ಕಾಣಿಸಿಕೊಳ್ಳಬಹುದು. ನಿಯಮಿತವಾಗಿ ಊಟ ಬಿಟ್ಟರೆ ಮೆಟಾಬಾಲಿಸಂ ಕೂಡ ಹದಗೆಡುತ್ತದೆ.
ಗೋಧಿಯಿಂದ ಮಾಡಿದ ಚಪಾತಿಯಲ್ಲಿ ಫೈಬರ್ ಹೆಚ್ಚು ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರಾತ್ರಿ ಹೊಟ್ಟೆ ಭಾರವಾಗದಂತೆ ನೋಡಿಕೊಳ್ಳುತ್ತದೆ.
ಅನ್ನಕ್ಕಿಂತ ಚಪಾತಿ ಲೈಟ್ ಆಗಿರುತ್ತೆ: ರಾತ್ರಿ ಅನ್ನ ಸೇವನೆ ಮಾಡಿದರೆ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಚಪಾತಿ ತಿಂದರೆ ಸಕ್ಕರೆ ಅಂಶ ದೇಹದಲ್ಲಿ ನಿಧಾನವಾಗಿ ಶಕ್ತಿ ನೀಡುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ.
ಚಪಾತಿ ಒಳ್ಳೆಯದು ಎಂದರೆ ಹೆಚ್ಚು ತಿನ್ನಬೇಕು ಎಂಬರ್ಥವಲ್ಲ. 1 ಅಥವಾ 2 ಚಪಾತಿ ಸಾಕು. ಜೊತೆಗೆ ಲಘು ತರಕಾರಿ ಪಲ್ಯ ಸೇರಿಸಿದರೆ ಸಮತೋಲನ ಸಿಗುತ್ತದೆ.
ಚಪಾತಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸುವುದಿಲ್ಲ. ಆದ್ದರಿಂದ ಮಧುಮೇಹ ಇರುವವರು ರಾತ್ರಿ ಚಪಾತಿಯನ್ನು ಆಯ್ಕೆ ಮಾಡಬಹುದು.
ರಾತ್ರಿ ಮಲಗುವ ಕನಿಷ್ಠ 2 ಗಂಟೆ ಮೊದಲು ಚಪಾತಿ ಊಟ ಮಾಡಿದರೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಮತ್ತು ನಿದ್ರೆಯ ಗುಣಮಟ್ಟವೂ ಉತ್ತಮವಾಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)


