ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಕ್ರಾಂತಿ ಹಬ್ಬದ ದಿನವೇ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್ ಆಧಾರಿತ ದಿನ, ಮೂರು ದಿನ ಮತ್ತು 5 ದಿನಗಳ ಪಾಸ್ ಲಭ್ಯವಿರಲಿದೆ.
1, 3, 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ನ BMRCL ಪರಿಚಯಿಸಿದ್ದು, ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟುದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು.
ಅದಕ್ಕಾಗಿ ಭದ್ರತಾ ಠೇವಣಿ 50 ರೂಪಾಯಿ ಪಾವತಿ ಮಾಡಬೇಕಿತ್ತು. ಆದರಿನ್ನು ಮೊಬೈಲ್‌ನಲ್ಲೇ QR ಕೋಡ್ ಬಳಸಿ ಪಾಸ್ ಪಡೆಯಬಹುದಾಗಿದ್ದು, ಯಾವುದೇ ಭದ್ರತಾ ಠೇವಣಿ ಇರುವುದಿಲ್ಲ. 1 ದಿನದ ಮೆಟ್ರೋ ಪ್ರಯಾಣ ಪಾಸ್ಗೆ 250 ರೂ., 3 ದಿನಗಳ ಮೆಟ್ರೋ ಪ್ರಯಾಣ ಪಾಸ್ಗೆ 550 ರೂ. ಮತ್ತು 5 ದಿನಗಳ ಮೆಟ್ರೋ ಪ್ರಯಾಣ ಪಾಸ್ಗೆ 850 ರೂ. ನಿಗದಿ ಮಾಡಲಾಗಿದೆ.


