January15, 2026
Thursday, January 15, 2026
spot_img

ವಾಲ್ಮೀಕಿ ಸಮುದಾಯ ಭವನ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ

ಹೊಸದಿಗಂತ ವರದಿ ಬೆಳಗಾವಿ :

ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಸಿ, ಎಸ್ಟಿ ಸಮುದಾಯದ ಜನರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆಯೊಂದು ನಡೆದಿದೆ. ‌

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ಎರಡು ಸಮುದಾಯಗಳು ಹೊಡೆದಾಡಿಕೊಂಡಿದ್ದಾರೆ.
ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಲಾಟೆ ಪ್ರಾರಂಭವಾಗಿರುವುದರಿಂದ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಸದಾಶಿವ ಭಜಂತ್ರಿ ಎಂಬುವವರ ಮನೆಯ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆದಿದ್ದು, ಶೌಚಾಲಯ, ಮನೆ ಮಾಳಿಗೆ ಸೇರಿದಂತೆ ಮನೆಯ ಹಲವು ಭಾಗಗಳ ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಮನೆಯಲ್ಲಿದ್ದ ವಸ್ತುಗಳು ಪುಡಿ ಪುಡಿಯಾಗಿದ್ದು, ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.

ಘಟನಾ ಸ್ಥಳಕ್ಕೆ ನೇಸರಗಿ ಪೊಲೀಸರು ದೌಡಾಯಿಸಿ ಗಲಾಟೆ ನಿಯಂತ್ರಿಸಿದರು, ಎರಡು ಗುಂಪುಗಳು ಕೇಳದೆ ಪೊಲೀಸರ ಮುಂದೆಯೂ ವಾಗ್ವಾದ ಮುಂದುವರಿತ್ತು. ಮಹಿಳೆಯರನ್ನೂ ಲೆಕ್ಕಿಸದೆ ಪುರುಷರಿಂದ ಅವಾಚ್ಯ ಪದಗಳಿಂದ ನಿಂದನೆಯ ಆರೋಪಗಳು ಕೇಳಿ ಬಂದಿವೆ.‌
ಈ ಗಲಾಟೆಯಿಂದ ಎರಡೂ ಸಮುದಾಯದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ ಘಟನೆಯ ಕುರಿತು ನೇಸರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Most Read

error: Content is protected !!