January16, 2026
Friday, January 16, 2026
spot_img

CINE | ಮಾಡೋದಿಲ್ಲ ಅಂದಿದ್ದನ್ನೇ ಮಾಡಿದ ನಟಿ ಸಾಯಿ ಪಲ್ಲವಿ! ಈ ವಿಷಯದಲ್ಲಿ ಈಗ್ಯಾಕೆ ರೂಲ್ಸ್‌ ಬ್ರೇಕ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಮೇಕ್‌ ಸಿನಿಮಾಗಳಿಗೆ ಸದಾ ನೋ ಎನ್ನುತ್ತಲೇ ಬಂದಿದ್ದ ನಟಿ ಸಾಯಿ ಪಲ್ಲವಿ ಇದೀಗ ರೂಲ್ಸ್‌ ಬ್ರೇಕ್‌ ಮಾಡಿ ರಿಮೇಕ್‌ ಸಿನಿಮಾ ಮಾಡಿದ್ದಾರೆ.

ಇದೀಗ ಸಾಯಿ ಪಲ್ಲವಿ ಮೊದಲ ಬಾರಿ ಬಾಲಿವುಡ್​ಗೆ ಕಾಲಿಟ್ಟಿದ್ದು, ಮೊದಲ ಹೆಜ್ಜೆಯಲ್ಲೇ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಜೊತೆಗೆ ಮೊದಲ ಬಾಲಿವುಡ್ ಸಿನಿಮಾ ಮೂಲಕ ಇಷ್ಟು ವರ್ಷ ಪಾಲಿಸಿಕೊಂಡು ಬಂದ ಸಂಪ್ರದಾಯವೊಂದನ್ನು ಮುರಿದಿದ್ದಾರೆ.

ಸಾಯಿ ಪಲ್ಲವಿ ಹಿಂದಿಯ ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವುದು ತಿಳಿದೇ ಇದೆ. ಆದರೆ ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಸಿನಿಮಾ ಇದಲ್ಲ ಬದಲಿಗೆ ಆಮಿರ್ ಖಾನ್ ಪುತ್ರನ ಜೊತೆಗೆ ನಟಿಸಿರುವ ‘ಏಕ್ ದಿನ್’. 2024 ರ ಆರಂಭದಲ್ಲೇ ಚಿತ್ರೀಕರಣ ಶುರುವಾದರೂ ಬಹಳ ತಡವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಸಾಯಿ ಪಲ್ಲವಿ ಸಖತ್ ಗಮನ ಸೆಳೆಯುತ್ತಿದ್ದಾರೆ.

ಆಮಿರ್ ಖಾನ್ ಪುತ್ರ ಝುನೈದ್ ಖಾನ್ ನಾಯಕನಾಗಿ ಸಾಯಿ ಪಲ್ಲವಿ ನಾಯಕಿಯಾಗಿರುವ ‘ಏಕ್ ದಿನ್’ ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ ಆಗಿದ್ದು, ಇಬ್ಬರು ಭಾರತೀಯರು ದೂರದ ಜಪಾನ್​ನಲ್ಲಿ ಪರಸ್ಪರ ಪ್ರೀತಿಗೆ ಬೀಳುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಜಪಾನ್​​ನಲ್ಲಿಯೇ ಚಿತ್ರೀಕರಿಸಲಾಗಿದ್ದು, ಸಿನಿಮಾದ ಟೀಸರ್​​ನಲ್ಲಿ ಜಪಾನ್​ ಸುಂದರ ತಾಣಗಳು ಅದ್ಭುತವಾಗಿ ಕಾಣುತ್ತಿವೆ.

‘ಏಕ್ ದಿನ್’ ಸಿನಿಮಾವನ್ನು ಸುನಿಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರಾಮ್ ಸಂಪತ್ ಸಂಗೀತವಿದೆ. ಈ ಸಿನಿಮಾ 2016ರಲ್ಲಿ ಬಿಡುಗಡೆ ಆಗಿದ್ದ ಥಾಯ್ ಸಿನಿಮಾದ ರೀಮೇಕ್ ಆಗಿದೆ. ಅಸಲಿಗೆ ಸಾಯಿ ಪಲ್ಲವಿ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಈ ಹಿಂದೆ ರೀಮೇಕ್ ಸಿನಿಮಾ ಎಂಬ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದರು. ಖುದ್ದು ವೇದಿಕೆ ಮೇಲೆ ತಾವು ರೀಮೇಕ್ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಥಾಯ್ ಭಾಷೆಯ ‘ಒನ್ ಡೇ’ ಸಿನಿಮಾದ ರೀಮೇಕ್​​ನಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ‘ಏಕ್ ದಿನ್’ ಸಿನಿಮಾ ಮೇ 1 ರಂದು ಬಿಡುಗಡೆ ಆಗಲಿದೆ.

Must Read

error: Content is protected !!