January16, 2026
Friday, January 16, 2026
spot_img

CINE | ‘ಸೀತಾಮಹಾಲಕ್ಷ್ಮಿ’ ಜೊತೆ ಎರಡನೇ ಮದುವೆಗೆ ರೆಡಿಯಾದ ನಟ ಧನುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲ ವರ್ಷಗಳ ಹಿಂದೆ ಡಿವೋರ್ಸ್‌ ಪಡೆದಿದ್ದ ನಟ ಧನುಷ್‌ ಇದೀಗ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಫೆಬ್ರವರಿಯ ಪ್ರೇಮಿಗಳ ದಿನದಂದು ನಟ ಧನುಷ್‌ ಹಾಗೂ ನಟಿ ಮೃಣಾಲ್‌ ಠಾಕೂರ್‌ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.

ಎರಡು ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇರುವ ನಟಿ ಮೃಣಾಲ್‌ ಹಾಗೂ ಧನುಷ್‌ ಹಿರಿಯರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.

ಮೃಣಾಲ್ ಠಾಕೂರ್ ಗೆ ಈಗ 33 ವರ್ಷ ವಯಸ್ಸು, ಧನುಶ್ ಅವರಿಗೆ 42 ವರ್ಷ. ವಯಸ್ಸಿನ ಅಂತರವಿದ್ದರೂ ಮದುಗೆ ಪೋಷಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಸಹ ಯಶಸ್ವಿ ನಟ ಮತ್ತು ನಟಿಯರು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Must Read

error: Content is protected !!