ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಜಗತ್ತಿನ ಪ್ರಮುಖ ಬೆಳವಣಿಗೆಯ ಎಂಜಿನ್ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದ್ದು ದೇಶದ ಮೂರನೇ ತ್ರೈಮಾಸಿಕದ ಬೆಳವಣಿಗೆಯು ನಿರೀಕ್ಷೆಗಿಂತ ಬಲವಾಗಿ ಹೊರಹೊಮ್ಮಿದೆ ಎಂದು ಐಎಮ್‌ಎಫ್ ಗಮನಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ IMF ನ ಸಂವಹನ ವಿಭಾಗದ ನಿರ್ದೇಶಕಿ ಜೂಲಿ ಕೊಜಾಕ್, ಭಾರತದಲ್ಲಿ ನಾವು ನೋಡಿದ್ದು ಏನೆಂದರೆ ಈ ದೇಶ ಜಗತ್ತಿಗೆ ಪ್ರಮುಖ ಬೆಳವಣಿಗೆಯ ಎಂಜಿನ್ ಆಗಿದೆ.
ಆರ್ಟಿಕಲ್ IV ಸಿಬ್ಬಂದಿ ವರದಿಯ ಭಾಗವಾಗಿ ನಡೆಸಲಾದ IMF ನ ಇತ್ತೀಚಿನ ಮೌಲ್ಯಮಾಪನವು 2025–26 ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯನ್ನು ಶೇಕಡಾ 6.6 ರಷ್ಟು ಅಂದಾಜಿಸಿದೆ. ಇದು ಹೆಚ್ಚಾಗಿ ಬಲವಾದ ದೇಶೀಯ ಬಳಕೆಯಲ್ಲಿ ಆಧಾರವಾಗಿದೆ ಎಂದು ಹೇಳಿದರು.
2025 ರಲ್ಲಿ ಭಾರತದ ಬೆಳವಣಿಗೆಯ ಕಥೆಯ ಬಗ್ಗೆ IMF ನ ಮೌಲ್ಯಮಾಪನದ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸಿದ ಅವರು, ‘ನಾವು ನೋಡಿರುವುದು ಭಾರತದಲ್ಲಿ ಮೂರನೇ ತ್ರೈಮಾಸಿಕದ ಬೆಳವಣಿಗೆಯು ನಿರೀಕ್ಷೆಗಿಂತ ಬಲವಾಗಿ ಹೊರಹೊಮ್ಮಿದೆ. ಇದು IMF ತನ್ನ ಮುನ್ಸೂಚನೆಯನ್ನು ಮುಂದೆ ನವೀಕರಿಸುವ ಸಾಧ್ಯತೆಯಿದೆ ಎಂದು ಹೇಳಿದರು.


