ಹೊಸದಿಗಂತ ವರದಿ ವಿಜಯಪುರ:
ಕಬ್ಬಿನ ಗದ್ದೆಯ ಬೆಂಕಿ ನಂದಿಸಲು ಹೋಗಿ ವ್ಯಕ್ತಿಯೊಬ್ಬ ಸಜೀವ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನಹಟ್ಟಿ ಪಿಎ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮಲ್ಲನಗೌಡ ಬಿರಾದಾರ ಉರ್ಫ್ ಮೇಲಿನಮನಿ ಸಜೀವ ದಹನಗೊಂಡ ನತದೃಷ್ಟ ವ್ಯಕ್ತಿ.
ಮಲ್ಲನಗೌಡ ಬಿರಾದಾರರ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇಡಿ ಕಬ್ಬಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ, ಇದನ್ನು ಕಂಡ ಮಲ್ಲನಗೌಡ ಬೆಂಕಿ ನಂದಿಸಲು ಹೋಗಿದ್ದು, ಸಜೀವವಾಗಿ ದಹನಗೊಂಡಿದ್ದಾನೆ.
ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ.
ಈ ಘಟನೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


