ಹೊಸ ದಿಗಂತ ಡಿಜಿಟಲ್ ಡೆಸ್ಕ್:
2026ರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL)ನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ ಉತ್ತಮ ಆರಂಭವನ್ನೇ ಪಡೆದಿತ್ತು. ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿದ ಕರ್ಣ ಆರ್ಯನ್ ಕೇವಲ 33 ಎಸೆತಗಳಲ್ಲಿ 83 ರನ್‌ಗಳನ್ನು ಬಾರಿಸಿದರು. ಇನ್ನು ಪ್ರದೀಪ್ 13 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಆದರೆ ಕಿಚ್ಚ ಸುದೀಪ್ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ಕರ್ನಾಟಕ ಬುಲ್ಡೋಜರ್ಸ್ 170 ರನ್‌ಗಳನ್ನು ಕಲೆ ಹಾಕಿ, ಪಂಜಾಬ್ ದಿ ಶೇರ್ ತಂಡಕ್ಕೆ 171 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿ ಬೆನ್ನಟ್ಟಿದ ಪಂಜಾಬ್ ಡಿ ಶೇರ್ ತಂಡ 139 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಬುಲ್ಡೋಜರ್ಸ್ 31 ರನ್‌ಗಳ ಗೆಲುವಿನೊಂದಿಗೆ CCL 2026 ಅಭಿಯಾನವನ್ನು ಪ್ರಾರಂಭಿಸಿದೆ.


