ಪ್ರತಿದಿನ ಮಾಡುವ ರೈಸ್ ಐಟಂ ಗಿಂತ ಸ್ವಲ್ಪ ವಿಭಿನ್ನವಾಗಿ, ಹೊಸ ರುಚಿಯನ್ನು ಪ್ರಯತ್ನಿಸಬೇಕು ಅನ್ಸಿದ್ರೆ ಈ ಇಂಡೋನೇಷಿಯನ್ ಫ್ರೈಡ್ ರೈಸ್ ನಾಸಿ ಗೊರೆಂಗ್ ಒಳ್ಳೆಯ ಆಯ್ಕೆ. ನಮ್ಮ ಭಾರತೀಯ ಅಡುಗೆ ಶೈಲಿಗೆ ಹೋಲಿಕೆಯಿದ್ದರೂ, ಅದರ ರುಚಿ ಬೇರೆ.
ಬೇಕಾಗುವ ಪದಾರ್ಥಗಳು
ಅನ್ನ – 2 ಕಪ್
ಎಣ್ಣೆ – 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 5–6 ಕೊತ್ತು
ಈರುಳ್ಳಿ – 1
ಹಸಿರು ಮೆಣಸಿನಕಾಯಿ – 1–2
ಕ್ಯಾರೆಟ್ – ½ ಕಪ್
ಬೀನ್ಸ್ / ಕ್ಯಾಬೇಜ್ – ½ ಕಪ್
ಸೋಯಾ ಸಾಸ್ – 1½ ಟೇಬಲ್ ಸ್ಪೂನ್
ಬ್ರೌನ್ ಶುಗರ್ – 1 ಟೀಸ್ಪೂನ್
ವಿನೇಗರ್ ಅಥವಾ ನಿಂಬೆ ರಸ – 1 ಟೀಸ್ಪೂನ್
ಮೆಣಸು ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಮೊಟ್ಟೆ – 1
ಸ್ಪ್ರಿಂಗ್ ಓನಿಯನ್ / ಕೊತ್ತಂಬರಿ – ಅಲಂಕಾರಕ್ಕೆ
ಒಂದು ದೊಡ್ಡ ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ. ಈಗ ಕ್ಯಾರೆಟ್, ಬೀನ್ಸ್, ಕ್ಯಾಬೇಜ್ ಸೇರಿಸಿ 2–3 ನಿಮಿಷ ಹೈ ಫ್ಲೇಮ್‌ನಲ್ಲಿ ಹುರಿಯಿರಿ.
ಅದೇ ಪ್ಯಾನ್ ನ ಬದಿಯಲ್ಲಿ ಮೊಟ್ಟೆ ಹಾಕಿ ಚೆನ್ನಾಗಿ ಸ್ಕ್ರ್ಯಾಂಬಲ್ ಮಾಡಿ. ಈಗ ಎಲ್ಲವನ್ನು ಮಿಕ್ಸ್ ಮಾಡಿ ಅದಕ್ಕೆ ಸೋಯಾ ಸಾಸ್, ಬ್ರೌನ್ ಶುಗರ್ (ಅಥವಾ ಸ್ವಲ್ಪ ಸಕ್ಕರೆ), ಮೆಣಸು ಪುಡಿ ಮತ್ತು ಉಪ್ಪು ಸೇರಿಸಿ ಕಲಸಿ. ಈಗ ಅನ್ನ ಸೇರಿಸಿ. ಹೈ ಫ್ಲೇಮ್‌ನಲ್ಲಿ ನಿಧಾನವಾಗಿ ತಿರುಗಿಸುತ್ತಾ ಫ್ರೈ ಮಾಡಿ. ಕೊನೆಯಲ್ಲಿ ವಿನೇಗರ್ ಅಥವಾ ಲೈಮ್ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ಪ್ರಿಂಗ್ ಓನಿಯನ್ ಅಥವಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.


