ಹೊಸದಿಗಂತ ವರದಿ ಯಾದಗಿರಿ:
ಹಾಡಹಗಲೇ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿ ಇದ್ದ ಸುಮಾರು 9.50 ಲಕ್ಷ ರೂ. ಮತ್ತು 35 ಗ್ರಾಂ ಬಂಗಾರ ದೊಚಿದ ಘಟನೆ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.
ಬಳಿಚಕ್ರ ಗ್ರಾಮದ ಶರಣಪ್ಪ ಕೊನೆಮನಿ ಎಂಬುವವರೇ ಹಣ ಕಳೆದುಕೊಂಡಿದ್ದಾರೆ.
ಶರಣಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದು, ಸೈದಾಪುರದಲ್ಲಿ ಆಸ್ತಿ ಖರೀದಿಸಲು ಇಲ್ಲಿಗೆ ಬಂದು, ಇಂದು ಕುಟುಂಬ ಸಮೇತ ಕೋರ್ಟ ಸಮೀಪದ ಎಸ್ ಬಿಐ ಬ್ಯಾಂಕಿನಲ್ಲಿ ಇದ್ದ 9.50 ಲಕ್ಷ ರೂ. ಹಣ ಡ್ರಾ ಮಾಡಿ ಕಾರ್ ನಲ್ಲಿ ಕುಳಿತು ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ಬಟ್ಟೆ ಅಂಗಡಿಯೊಂದರ ಮುಂದೆ ಬಂದು ನಿಂತಿದ್ದರು. ಕಾರ್ ನಲ್ಲಿ ಮೊದಲೇ ತಂದು ಇಟ್ಟಿದ್ದ ಐದು ಲಕ್ಷದ ಹಣದ ಜೊತೆ ಈ ಹಣವೂ ಸೇರಿಸಿ ಇಡಲಾಗಿತ್ತು.
ಆಗ ಬಟ್ಟೆ ತರಲೆಂದು ಹೆಂಡತಿ ಕಾರ್ ನಿಂದ ಇಳಿದರೇ, ಜೂಸ್ ಕುಡಿಯಲು ಮಗಳು, ತಾಯಿ, ಸಾಕಿದ ನಾಯಿಯೊಂದಿಗೆ ಇಳಿದು ಸ್ವಲ್ಪ ಮುಂದೆ ಬಂದಿದ್ದೆವೆ. ಆಗಲೇ ನಮ್ಮನ್ನು ಫಾಲೋಪ್ ಮಾಡುತ್ತ ಬಂದಿದ್ದ ಕಳ್ಳರು ನೇರವಾಗಿ ಬಂದವರೇ ಹಣ ಮತ್ತು ಅದರಲ್ಲಿ ಇಟ್ಟಿದ್ದ 35 ಗ್ರಾಂ ಬಂಗಾರ ದೋಚಿ ಪರಾರಿಯಾಗಿದ್ದಾರೆ ಎಂದು ಶರಣಪ್ಪ ದೂರಿನಲ್ಲಿ ಹೇಳಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ.


