January17, 2026
Saturday, January 17, 2026
spot_img

ದಾನ ಮಾಡೋದು ಒಳ್ಳೆಯದೇ ಆದರೆ ಈ ವಸ್ತುಗಳನ್ನಲ್ಲ!

ದಾನ ಮಾಡಬೇಕು, ಆದರೆ ಯಾವ ವಸ್ತುಗಳನ್ನು ದಾನ ಮಾಡಬೇಕು, ಯಾವಾಗ ದಾನ ಮಾಡಬೇಕು, ಯಾವ ಪ್ರಮಾಣದಲ್ಲಿ ದಾನ ಮಾಡಬೇಕು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ.

ಈ ನಾಲ್ಕು ವಸ್ತುಗಳನ್ನು ದಾನ ಮಾಡಬೇಡಿ.

ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನಾವು ತಪ್ಪಾಗಿಯೂ ಕೂಡ ಬೆಂಕಿ ಕಡ್ಡಿಗಳನ್ನು ಅಥವಾ ಬೆಂಕಿ ಪೊಟ್ಟಣಗಳನ್ನು ಯಾರಿಗೂ ದಾನವಾಗಿ ನೀಡಬಾರದು. ಬೆಂಕಿ ಕಡ್ಡಿಗಳನ್ನು ದಾನ ಮಾಡುವುದರಿಂದ ಕೌಟುಂಬಿಕ ಶಾಂತಿಯು ಹಾಳಾಗುತ್ತದೆ. ಕುಟುಂಬದಲ್ಲಿ ಅನಗತ್ಯ ಜಗಳಗಳು, ಮನಸ್ಥಾಪಗಳು ಹೆಚ್ಚಾಗುತ್ತದೆ ಎನ್ನಲಾಗಿದೆ.

ವೈದಿಕ ಗ್ರಂಥಗಳ ಪ್ರಕಾರ, ಕಪ್ಪು ಎಳ್ಳು ರಾಹು ಮತ್ತು ಕೇತುವಿಗೆ ನೇರವಾಗಿ ಸಂಬಂಧಿಸಿದೆ. ಇದು ಶನಿ ಗ್ರಹಕ್ಕೂ ಸಂಬಂಧಿಸಿದೆ ಮತ್ತು ಎಳ್ಳನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ನಂಬಿಕೆಯ ಪ್ರಕಾರ, ಕೆಲವೊಂದು ದಿನಗಳಲ್ಲಿ ಎಳ್ಳು ದಾನ ಮಾಡುವುದರಿಂದ ವ್ಯಕ್ತಿಯು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾನೆ ಹಾಗೂ ಹಣಕಾಸಿನ ಸಮಸ್ಯೆಗಳು ಆತನನ್ನು ಕಾಡತೊಡಗುತ್ತದೆ ಎಂದು ಹೇಳಲಾಗಿದೆ.

ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ತೊಂದರೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ. ಇದಲ್ಲದೆ, ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದರಿಂದ ದೈಹಿಕ ಸಮಸ್ಯೆಗಳು ಸಹ ಉದ್ಭವಿಸುತ್ತವೆ. ಏಕೆಂದರೆ ಕಬ್ಬಿಣವು ಭಗವಾನ್ ಶನಿದೇವನಿಗೆ ಸಂಬಂಧಿಸಿದ ವಸ್ತುವಾಗಿದೆ.

ಶಾಸ್ತ್ರದ ಪ್ರಕಾರ, ಅಪ್ಪಿತಪ್ಪಿಯೂ ಉಪ್ಪನ್ನು ದಾನ ಮಾಡಬಾರದು. ಏಕೆಂದರೆ ಉಪ್ಪನ್ನು ದಾನ ಮಾಡುವುದರಿಂದ, ನೀವು ಶನಿಯ ಕೋಪವನ್ನು ಎದುರಿಸಬೇಕಾಗಬಹುದು. ಇದಲ್ಲದೆ, ಉಪ್ಪನ್ನು ದಾನ ಮಾಡುವುದರಿಂದ, ಒಬ್ಬ ವ್ಯಕ್ತಿಯು ಸಾಲಕ್ಕೂ ಸಿಲುಕುತ್ತಾನೆ. ಅದರಲ್ಲೂ ಮುಸ್ಸಂಜೆ ಸಮಯದಲ್ಲಂತೂ ಉಪ್ಪನ್ನು ಯಾರಿಗೂ ನೀಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

Must Read

error: Content is protected !!