January17, 2026
Saturday, January 17, 2026
spot_img

ದೈನಂದಿನ ಪಾಸ್‌ ಬೇಡ್ವೇ ಬೇಡ, ಮೆಟ್ರೋ ತಿಂಗಳ ಪಾಸ್‌ಗೆ ಫುಲ್‌ ಡಿಮ್ಯಾಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋದಲ್ಲಿ ಅನಿಯಮಿತವಾಗಿ ಪ್ರಯಾಣಿಸುವವರಿಗೆ ಮೊಬೈಲ್ ಕ್ಯೂರ್ ಆಧಾರಿತ 1,3 ಮತ್ತು ಐದು ದಿನಗಳ ಪ್ರಯಾಣದ ಪಾಸ್ ನ್ನು ಬಿಎಂಆರ್ ಸಿಎಲ್ ಪರಿಚಯಿಸಿದ್ದು, ಇದರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇಂತಹ ಕಿರು ಅವಧಿಯ ಪಾಸ್ ನೀಡುವುದರ ಬದಲು ರಿಯಾಯಿತಿ ದರದಲ್ಲಿ ತಿಂಗಳ ಪಾಸ್ ಅಗತ್ಯವಿದೆ ಎಂದು ಅನೇಕ ಮಂದಿ ಹೇಳಿದ್ದಾರೆ.

ಸ್ಮಾರ್ಟ್ ಕಾರ್ಡ್ ಗಳಿಗಾಗಿ 50 ರೂ. ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲದೆ ಅನಿಯಮಿತವಾಗಿ ಸಂಚರಿಸುವ ದಿನದ ಪಾಸ್ ಗಳನ್ನು ಜನವರಿ 15 ರಿಂದ BMRCL ಜಾರಿಗೊಳಿಸಿದೆ. 1 ದಿನದ ಪಾಸ್ ರೂ. 250, ಮೂರು ದಿನದ ಪಾಸ್ ರೂ. 550 ಹಾಗೂ 5 ದಿನದ ಪಾಸ್ ಗೆ 850 ರೂ.ನಿಗದಿಪಡಿಸಲಾಗಿದೆ.

ಈ ಕ್ರಮವು ಸಂಪರ್ಕ ರಹಿತ ಮತ್ತು ಪೇಪರ್‌ ಲೆಸ್ ಪ್ರಯಾಣಕ್ಕೆ ಅನುಕೂಲವಾಗಿದ್ದು, ನಿಯಮಿತ ಕಚೇರಿಗೆ ಹೋಗುವವರಿಗೆ ಸ್ವಲ್ಪ ಮಟ್ಟಿಗೆ ದೈನಂದಿನ ಖರ್ಚುಗಳನ್ನು ಕಡಿಮೆ ಮಾಡುತ್ತದೆ ಎನ್ನುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ.

250 ಅಥವಾ 300 ರೂ. ದರದ ದೈನಂದಿನ ಪಾಸ್ ಗಳಿಂದ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗುವುದಿಲ್ಲ. ಮೆಟ್ರೋ ಹಾಗೂ ಬಸ್ ಗಳಲ್ಲಿ ಓಡಾಡುವಂತಹ ಪಾಸ್ ಗಳು ಬೆಂಗಳೂರಿಗರಿಗೆ ಅಗತ್ಯವಾಗಿದೆ. ಎರಡು-ಮಾರ್ಗದ ಮೆಟ್ರೋ ಪ್ರಯಾಣಕ್ಕಾಗಿ ರೂ 100 ಕ್ಕಿಂತ ಹೆಚ್ಚು ಖರ್ಚು ಮಾಡಿದ್ದರೆ ಬಸ್, ಅಥವಾ ಪಾರ್ಕಿಂಗ್ ಗಾಗಿ ಮತ್ತೆ ಖರ್ಚು ಮಾಡಬೇಕಾಗುತ್ತದೆ. ಇದರಿಂದ ತಿಂಗಳ ವೆಚ್ಚ ಹೆಚ್ಚಾಗುತ್ತದೆ ಎಂದು ಪ್ರಯಾಣಿಕರು ಹೇಳಿದ್ದಾರೆ.

Must Read

error: Content is protected !!