ಜೀವನದಲ್ಲಿ ನಾವು ಯಾವಾಗಲೂ ಮುಂದಿನ ದಿನಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಮನಸ್ಸು ಮಾತ್ರ ಮತ್ತೆ ಮತ್ತೆ ಹಿಂತಿರುಗುವುದು ಕಳೆದುಹೋದ ಕ್ಷಣಗಳ ಕಡೆಗೆ. ಆಗಿದ್ದ ಮಾತುಗಳು, ಮಾಡದ ನಿರ್ಧಾರಗಳು, ಕೈ ತಪ್ಪಿದ ಅವಕಾಶಗಳು ಇವೆಲ್ಲವೂ ನೆನಪಿನೊಳಗೆ ಮೌನವಾಗಿ ಬದುಕುತ್ತಿರುತ್ತವೆ. ಆದರೆ ಏಕೆ ನಾವು ಹೋದ ಸಮಯವನ್ನೇ ಹೆಚ್ಚು ನೆನಪಿಸಿಕೊಳ್ಳುತ್ತೇವೆ? ಅಂತ ಯೋಚ್ನೆ ಮಾಡಿದ್ದೀರಾ?
ಕಳೆದ ಕಾಲದಲ್ಲಿ ಏನಾದರೂ ಬದಲಾಗುವುದಿಲ್ಲ ಅನ್ನೋ ಭಾವನೆ ಮನಸ್ಸಿಗೆ ಒಂದು ಸುರಕ್ಷಿತ ಭಾವ ಕೊಡುತ್ತದೆ. ಮುಂದಿನ ದಿನಗಳ ಅನಿಶ್ಚಿತತೆಗಿಂತ, ಹೋದ ಕ್ಷಣಗಳು ತಿಳಿದಿರುವ ಕಥೆಗಳಂತೆ ಕಾಣಿಸುತ್ತವೆ.
ಕಳೆದುಹೋದ ಸಮಯದ ಜೊತೆ ಮಾಡದ ಆಯ್ಕೆಗಳು ಕೂಡ ಬರುತ್ತವೆ. “ಆಗ ಹೀಗೆ ಮಾಡಿದ್ರೆ?” ಅನ್ನೋ ಪ್ರಶ್ನೆಗಳು ಉತ್ತರ ಸಿಗದಿದ್ದರೂ ಮನಸ್ಸನ್ನು ಬಿಡುವುದಿಲ್ಲ.
ಹಿಂದಿನ ಕಾಲದಲ್ಲಿ ಕೇವಲ ಸಂತೋಷವಲ್ಲ, ನೋವೂ ಇರುತ್ತದೆ. ಆದರೆ ಸಮಯ ಕಳೆದಂತೆ ನೋವು ಮೃದುವಾಗುತ್ತದೆ, ಸಂತೋಷ ಮಾತ್ರ ಹೆಚ್ಚು ನೆನಪಾಗಿ ಉಳಿಯುತ್ತವೆ. ಅದಕ್ಕೇ ನೆನಪುಗಳು ಸುಂದರವಾಗಿ ಕಾಣಿಸುತ್ತವೆ.
ನಾವು ಈಗಿನ ಕ್ಷಣದಲ್ಲಿ ಇದ್ದರೂ, ಮನಸ್ಸು ಅಲ್ಲಿರೋದಿಲ್ಲ. ಆ ಕಾರಣಕ್ಕೆ ಇಂದಿನ ದಿನ ಮಂಕಾಗುತ್ತದೆ, ಹೋದ ದಿನಗಳು ಮಾತ್ರ ಸ್ಪಷ್ಟವಾಗಿ ನೆನಪಾಗುತ್ತವೆ.
ಹೋದ ಸಮಯವನ್ನು ನಾವು ನೆನಪಿಸಿಕೊಳ್ಳಬಹುದು, ಆದರೆ ಭವಿಷ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆ ನಿಯಂತ್ರಣದ ಭ್ರಮೆ ಮನಸ್ಸನ್ನು ಹಿಂದಕ್ಕೆ ಎಳೆಯುತ್ತದೆ.
ಕೆಲವರು, ಕೆಲವು ಕ್ಷಣಗಳು, ಕೆಲವು ಮಾತುಗಳು ಇವನ್ನೆಲ್ಲಾ ಮನಸ್ಸು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತದೆ. ಇವುಗಳೇ ಬಿಡದೇ ಇರುವುದೇ ನೆನಪಾಗಿ ಬದಲಾಗುತ್ತದೆ.


