ತೂಕ ಇಳಿಸೋಕೆ, ಫಿಟ್ ಲೈಫ್ ಅಥವಾ ಜಿಮ್ ಡಯಟ್‌ನಲ್ಲಿ ಇದ್ದವರಿಗೆ ಪ್ರೊಟೀನ್ ತುಂಬಾ ಮುಖ್ಯ. ಅದೇ ಸಮಯದಲ್ಲಿ ಬೋರ್ ಆಗದ ರುಚಿಯೂ ಬೇಕು ಅಲ್ವಾ? ಅಂಥವರಿಗೆ ಈ ಸೋಯಾ ಪನೀರ್ ಟಿಕ್ಕಿ ಸೂಪರ್ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಸೋಯಾ ಚಂಕ್ಸ್ – 1 ಕಪ್
ಪನೀರ್ (ತುರಿದುಕೊಂಡದ್ದು) – ½ ಕಪ್
ಬೇಯಿಸಿದ ಆಲೂಗಡ್ಡೆ – 1
ಈರುಳ್ಳಿ – 1 ಸಣ್ಣದು
ಹಸಿಮೆಣಸು – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ ಪುಡಿ – ½ ಚಮಚ
ಧನಿಯಾ ಪುಡಿ – ½ ಚಮಚ
ಗರಂ ಮಸಾಲಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಟಿಕ್ಕಿ ಹುರಿಯಲು ಸ್ವಲ್ಪ
ತಯಾರಿಸುವ ವಿಧಾನ:
ಮೊದಲು ಸೋಯಾ ಚಂಕ್ಸ್ ಅನ್ನು ಉಪ್ಪು ಹಾಕಿದ ಬಿಸಿ ನೀರಿನಲ್ಲಿ 5–7 ನಿಮಿಷ ನೆನೆಸಿ, ನೀರು ಒತ್ತಿ ಮಿಕ್ಸಿಯಲ್ಲಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
ಒಂದು ಪಾತ್ರೆಯಲ್ಲಿ ಸೋಯಾ ಮಿಶ್ರಣ, ಪನೀರ್, ಆಲೂಗಡ್ಡೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ. ಮಸಾಲೆಗಳು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಟಿಕ್ಕಿ ಮಿಶ್ರಣ ತಯಾರಿಸಿ.
ಕೈಯಲ್ಲಿ ಟಿಕ್ಕಿ ಆಕಾರಕ್ಕೆ ಮಾಡಿ. ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಎರಡೂ ಕಡೆ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.


