ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 2025ರ ಡಿಸೆಂಬರ್ ನಲ್ಲಿ ವಿಮಾನಗಳ ಸಂಚಾರ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟು ಮಾಡಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಕಾರಣಕ್ಕೆ ಇಂಡಿಗೋ ವಿಮಾನ ಸಂಸ್ಥಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು 22.20 ಕೋಟಿ ರೂಪಾಯಿಗಳ ದಂಡ ವಿಧಿಸಿದೆ.
2025ರ ಡಿಸೆಂಬರ್ 3 ರಿಂದ 5ವರೆಗೆ ಇಂಡಿಗೋ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. 2,507 ವಿಮಾನಗಳ ಪ್ರಯಾಣ ರದ್ದು ಹಾಗೂ ಸಾವಿರದ 852 ವಿಮಾನಗಳ ಹಾರಾಟ ವಿಳಂಬವಾಗಿತ್ತು. ಇದರಿಂದಾಗಿ ಮೂರು ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಗೊಂಡು ತೊಂದರೆ ಅನುಭವಿಸಿದ್ದರು.
ಈ ಹಿನ್ನೆಲೆಯಲ್ಲಿ DGCA ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ನೇಮಿಸಿತ್ತು. ಸಮಿತಿಯು ಇಂಡಿಗೋ ವಿಮಾನಗಳ ಕಾರ್ಯಾಚರಣೆ ವ್ಯತ್ಯಯಕ್ಕೆ ಕಾರಣವಾದ ಅಂಶಗಳ ಮೌಲ್ಯಮಾಪನ ನಡೆಸಿದ್ದು, ಇದಕ್ಕೆ ಆಡಳಿತ ಮಂಡಳಿಯ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣ ವೈಫಲ್ಯ ಕಾರಣ ಎಂಬುದನ್ನು ಪತ್ತೆ ಮಾಡಿತ್ತು. ಸಮಿತಿಯು ನೀಡಿದ ವರದಿ ಅನ್ವಯ ಇದೀಗ DGCA ಇಂಡಿಗೋಗೆ ದಂಡ ವಿಧಿಸಿದೆ.


