ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾ ಸಮರ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಈ ಸೀಸನ್‌ನ ‘ಗ್ರ್ಯಾಂಡ್ ಫಿನಾಲೆ’ ಅದ್ದೂರಿಯಾಗಿ ನಡೆಯುತ್ತಿದ್ದು, ಟ್ರೋಫಿ ಗೆಲ್ಲುವ ಕನಸು ಹೊತ್ತಿದ್ದ ರಗಡ್ ರಘು ಟಾಪ್-5 ಹಂತದಲ್ಲೇ ಮನೆಯಿಂದ ಹೊರಬಿದ್ದಿದ್ದಾರೆ.
ಇಡೀ ಸೀಸನ್‌ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಆಟದಿಂದ ಗಮನ ಸೆಳೆದಿದ್ದ ರಘು, ವಿಜೇತರ ಪಟ್ಟಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಅಂತಿಮ ಕ್ಷಣದ ಜಿದ್ದಾಜಿದ್ದಿಯಲ್ಲಿ ಅವರು ಎಲಿಮಿನೇಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ರಘು ನಿರ್ಗಮನದ ನಂತರ ಮನೆಯೊಳಗೆ ಈಗ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ ಮತ್ತು ಗಿಲ್ಲಿ ನಾಲ್ವರು ಬಲಿಷ್ಠ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಈ ನಾಲ್ವರಲ್ಲಿ ಅಂತಿಮವಾಗಿ ಯಾರು ಬಿಗ್ ಬಾಸ್ ಸೀಸನ್ 12ರ ರಾಜ ಅಥವಾ ರಾಣಿಯಾಗಲಿದ್ದಾರೆ ಎಂಬುದು ತಿಳಿಯಲಿದೆ. ವೇದಿಕೆಯ ಮೇಲೆ ಸುದೀಪ್ ಅವರು ಯಾರ ಕೈ ಎತ್ತಲಿದ್ದಾರೆ ಎಂಬ ಕಾತರ ಈಗ ಮನೆ ಮಾಡಿದೆ.


