ಊಟ ಟೇಸ್ಟಿಯಾಗಿದೆ ಅಂತಲೋ, ಅಪರೂಪಕ್ಕೆ ಹೆವಿ ತಿಂತಿವಿ ಏನಾಗಲ್ಲ ಅಂತಲೋ, ಫ್ರೀಯಾಗಿ ಎಂದೋ, ಮದುವೆ ಮನೆ ಊಟ ಒಳ್ಳೇದು ತಿಂದರೆ ಏನಾಗಲ್ಲ ಅಂತಲೋ ಓವರ್ ಆಗಿ ತಿಂದು ಆಮೇಲೆ ಒದ್ದಾಡ್ತೀರಾ? ಅತಿಯಾಗಿ ತಿನ್ನೋದನ್ನು ತಪ್ಪಿಸೋಕೆ ಈ ಹ್ಯಾಕ್ ಟ್ರೈ ಮಾಡಿ..
ನಿತ್ಯವೂ ನೀವು ಎರಡು ಚಪಾತಿ/ ದೋಸೆ ತಿಂತೀರಾ ಎಂದುಕೊಳ್ಳಿ. ಮೂರನೆಯದು ತಿನ್ನೋದಕ್ಕೆ ಆಸೆ ಆಗುತ್ತದೆ ಎಂದುಕೊಳ್ಳಿ.
ಆ ಸಮಯದಲ್ಲಿ ನಿಮ್ಮ ಮೆದುಳಿಗೆ ಕೇಳಿ ನಿಮಗೆ ನಾಲ್ಕು ಚಪಾತಿ ತಿನ್ನೋಕೆ ಸಾಧ್ಯವಾ? ಮೂರು ಬೇಕು ಎನಿಸುತ್ತದೆ. ಆದರೆ ನಾಲ್ಕು ಎನ್ನುವ ಆಲೋಚನೆಯೇ ಆಗಲ್ಲಪ್ಪ, ಹೆವಿ ಆಗತ್ತೆ ಅಂತೇನಾದರೂ ಅನಿಸಿದರೆ ಎರಡಕ್ಕೇ ಸ್ಟಾಪ್ ಮಾಡಿ
ಇದರ ಅರ್ಥ ನಿಮ್ಮ ಹೊಟ್ಟೆ ಎರಡು ಚಪಾತಿಗೆ ಶೇ.೮೦ರಷ್ಟು ತುಂಬಿದೆ ಎಂದರ್ಥ. ಪ್ರತೀ ಊಟಕ್ಕೂ ಈ ರೀತಿ ಆಲೋಚಿಸಿ. ಓವರ್ ಈಟಿಂಗ್ ನಿಂತು ಹೋಗುತ್ತದೆ.


