ಸಿಹಿ ತಿನ್ನಬೇಕು ಅನ್ನಿಸೋ ಕ್ಷಣಗಳಲ್ಲಿ ಹೆವಿ ಡೆಸೆರ್ಟ್‌ಗಳಿಗೆ ಹೋಗೋ ಬದಲು, ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಈ ಸಿಹಿಕುಂಬಳಕಾಯಿ ಮಗ್ ಕೇಕ್ ಒಳ್ಳೆಯ ಆಯ್ಕೆ. ಕಡಿಮೆ ಪದಾರ್ಥಗಳು, ಕಡಿಮೆ ಸಮಯ, ಆದರೆ ರುಚಿ ಮತ್ತು ಪೋಷಕಾಂಶ ಎರಡೂ ಹೆಚ್ಚಾಗಿರುತ್ತವೆ. ಡಯಟ್‌ನಲ್ಲಿದ್ದರೂ ಅಥವಾ ಸಂಜೆ ಟೀ ಜೊತೆ ಸ್ವೀಟ್ ಕ್ರೇವಿಂಗ್ ಕಂಟ್ರೋಲ್ ಮಾಡ್ಬೇಕಾದರೂ ಈ ರೆಸಿಪಿ ಸೂಪರ್.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಸಿಹಿಕುಂಬಳಕಾಯಿ – 3 ಟೇಬಲ್ ಸ್ಪೂನ್
ಗೋಧಿ ಹಿಟ್ಟು / ಓಟ್ಸ್ ಪೌಡರ್ – 2 ಟೇಬಲ್ ಸ್ಪೂನ್
ಜೇನುತುಪ್ಪ / ಬೆಲ್ಲದ ಪುಡಿ – 1–1½ ಟೀ ಸ್ಪೂನ್
ಬೇಕಿಂಗ್ ಪೌಡರ್ – ¼ ಟೀ ಸ್ಪೂನ್
ದಾಲ್ಚಿನ್ನಿ ಪುಡಿ – ಒಂದು ಚಿಟಿಕೆ (ಐಚ್ಛಿಕ)
ಹಾಲು – 2 ಟೇಬಲ್ ಸ್ಪೂನ್
ವನಿಲ್ಲಾ ಎಸೆನ್ಸ್ – 2–3 ಹನಿ
ಕಾಯಿ ತುರಿ / ಚಾಕೊಲೇಟ್ ಚಿಪ್ಸ್ – ಸ್ವಲ್ಪ
ಮಾಡುವ ವಿಧಾನ:
ಮೈಕ್ರೋವೇವ್ ಸೇಫ್ ಮಗ್ ತೆಗೆದುಕೊಂಡು ಅದರಲ್ಲಿ ಸಿಹಿಕುಂಬಳಕಾಯಿ ಪೇಸ್ಟ್ ಹಾಕಿ. ಅದಕ್ಕೆ ಗೋಧಿ ಹಿಟ್ಟು, ಬೇಕಿಂಗ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಜೇನುತುಪ್ಪ, ಹಾಲು, ವನಿಲ್ಲಾ ಎಸೆನ್ಸ್ ಮತ್ತು ದಾಲ್ಚಿನ್ನಿ ಪುಡಿ ಸೇರಿಸಿ ಸ್ಮೂತ್ ಬ್ಯಾಟರ್ ಆಗುವಂತೆ ಕಲಸಿ. ಮೇಲಿಂದ ಕಾಯಿ ತುರಿ ಅಥವಾ ಚಾಕೊಲೇಟ್ ಚಿಪ್ಸ್ ಹಾಕಿ.
ಮೈಕ್ರೋವೇವ್‌ನಲ್ಲಿ 1½ ರಿಂದ 2 ನಿಮಿಷ ಬೇಯಿಸಿ. ಸ್ವಲ್ಪ ತಣ್ಣಗಾದ ಮೇಲೆ ಮಗ್‌ನಲ್ಲೇ ಸರ್ವ್ ಮಾಡಿ.


