ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಮೆಟ್ರೋ ನಿಲ್ದಾಣದ ಪ್ಲಾಟ್ಫಾರಂನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿ ಮುಜುಗರ ಉಂಟು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಿಂಚಿತ್ತೂ ಸ್ವಚ್ಛತೆ ಬಗ್ಗೆ ಕಾಳಜಿ ಇರದ ವ್ಯಕ್ತಿಯ ನಡೆ ಕಂಡು ನೆಟ್ಟಿಗರು ಕ್ಯಾಕರಿಸಿ ಉಗಿದಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ. ಜನರಿರುವಾಗಲೇ ಮೂತ್ರ ವಿಸರ್ಜನೆ ಮಾಡಿಕೊಂಡು ನಿಂತು ಅಸಹ್ಯ ತರಿಸಿದ್ದಾನೆ, ಜತೆಗೆ ಹೈಜಿನ್ ಬಗ್ಗೆ ಈ ಮನುಷ್ಯನಿಗೆ ಅರಿವೇ ಇಲ್ಲವೇ ಎಂದು ಜನ ಗರಂ ಆಗಿದ್ದಾರೆ.
ಸಾವಿರಾರು ಪ್ರಯಾಣಿಕರು ಓಡಾಡುವ ಪ್ಲಾಟ್ಫಾರ್ಮ್ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿರುವ ವ್ಯಕ್ತಿಯ ಬೇಜವಾಬ್ದಾರಿಯುತ ವರ್ತನೆಯನ್ನು ತೋರಿಸುತ್ತದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗಾಜಿನ ಕಾರಿಡಾರ್ ಬಳಿ ನಿಂತು ಮೂತ್ರ ವಿಸರ್ಜನೆ ಮಾಡಿರುವುದನ್ನು ಕಾಣಬಹುದು. ಅದನ್ನು ಮತ್ತೊಬ್ಬ ಪ್ರಯಾಣಿಕ ರೆಕಾರ್ಡ್ ಮಾಡಿದ್ದಾನೆ. ಯಾರೋ ತನ್ನನ್ನು ರೆಕಾರ್ಡ್ ಮಾಡುತ್ತಿರುವುದನ್ನು ಆ ವ್ಯಕ್ತಿ ಗಮನಿಸಿ ಕ್ಷಮೆಯನ್ನೂ ಯಾಚಿಸದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಮೆಟ್ರೋ ಆವರಣದಲ್ಲಿ, ಕೆಲವರು ಬಹಿರಂಗವಾಗಿ ಮೂತ್ರ ವಿಸರ್ಜಿಸುತ್ತಾರೆ ಅಥವಾ ಮಕ್ಕಳನ್ನು ಅದೇ ರೀತಿ ಮಾಡಲು ಬಿಡುತ್ತಾರೆ ಇದು ಗಂಭೀರವಾದ ಸಂಗತಿ. ದೇಶಕ್ಕೆ ಮಾದರಿಯಾಗದಿದ್ದರೂ ತೊಂದರೆಯಿಲ್ಲ, ದೇಶದ ಮರ್ಯಾದಿ ತೆಗೆಯುವ ಇಂಥಾ ಕೆಲಸ ಯಾರೂ ಮಾಡಬೇಡಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.


