January20, 2026
Tuesday, January 20, 2026
spot_img

ಹಿಂಡಲಗಾ ಜೈಲಲ್ಲಿ ಖೈದಿಗಳ ನಡುವೆ ಹೊಡೆದಾಟ: ಕಲ್ಲಿನಿಂದ ತಲೆ ಜಜ್ಜಿ ಹಲ್ಲೆ

ಹೊಸದಿಗಂತ ವರದಿ, ಬೆಳಗಾವಿ :

ಹಿಂಡಲಗಾ ಜೈಲಿನಲ್ಲಿ ಖೈದಿಗಳು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಇಲ್ಲಿನ ಹಿಂಡಲಗಾ ಜೈಲಿನಲ್ಲಿ ಈ ಹಿಂದೆಯೂ ಹಲವಾರು ಬಾರಿ ಖೈದಿಗಳ ನಡುವೆ ಮಾರಾಮಾರಿಯೇ ಹಿಂಡಲಗಾ ಜೈಲಿನಲ್ಲಿ ನಡೆದಿತ್ತು. ಇದು ಮತ್ತೆ ಮರುಕಳಿಸಿದೆ. ಸೋಮವಾರ ಮತ್ತೆ ಹಿಂಡಲಗಾ ಜೈಲಿನಲ್ಲಿ ಖೈದಿಗಳು ಹೊಡೆದಾಡಿಕೊಂಡಿರುವಂತ ಘಟನೆ ನಡೆದಿದೆ.

ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಖೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎಸ್ ಟಿ ಡಿ ಫೋನ್ ಕಾಲ್ ವಿಚಾರಕ್ಕೆ ಆರಂಭಗೊಂಡ ಜಗಳ ಪರಸ್ಪರ ಕೈ ಮಿಲಾಯಿಸುವಂತ ಹಂತಕ್ಕೂ ತಲುಪಿದೆ. ಕಲ್ಲಿನಿಂದ ಜಜ್ಜಿ ಖೈದಿ ಸುರೇಶ್ ಬೆಳಗಾವಿ ಎಂಬುವರಿಗೆ ಹಲ್ಲೆ ಮಾಡಲಾಗಿದೆ. ಮಂಗಳೂರು ಮೂಲದ ಕೈದಿ ಫಯಾಸ್ ಎಂಬಾತನಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.

Must Read