January20, 2026
Tuesday, January 20, 2026
spot_img

ಬಿಎಂಟಿಸಿ ಟಿಕೆಟ್‌ ಹಣಕ್ಕೆ ಹಾಕಿದ್ರು ಕನ್ನ: ಮೂವರು ಕಂಡಕ್ಟರ್‌ಗಳ ಅಮಾನತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಟಿಕೆಟ್‌ ಹಣಕ್ಕೆ ಕನ್ನ ಹಾಕುತ್ತಿದ್ದ ಮೂವರು ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ.

ಅಧಿಕೃತ ಯುಪಿಐ ಕ್ಯೂಆರ್‌ ಕೋಡ್‌ ಬದಲಿಗೆ ತಮ್ಮ ವೈಯಕ್ತಿಕ ಕ್ಯೂಆರ್‌ ಕೋಡ್‌ ಬಳಸಿ ಟಿಕೆಟ್ ಮೊತ್ತವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಆರೋಪದಲ್ಲಿ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಗಿದೆ.

ಡಿಸೆಂಬರ್ 2025 ರಲ್ಲಿ ನಡೆಸಲಾದ ತಪಾಸಣೆಯ ಸಂದರ್ಭ ಬಿಎಂಟಿಸಿ ತನಿಖಾ ತಂಡವು ಈ ಅಕ್ರಮವನ್ನು ಪತ್ತೆಹಚ್ಚಿದೆ. ಈ ಮೂವರು ಸಿಬ್ಬಂದಿ ಟಿಕೆಟ್ ವಿತರಣೆಗಾಗಿ ಬಿಎಂಟಿಸಿ ಒದಗಿಸಿದ ಅಧಿಕೃತ ಯುಪಿಐ ಕ್ಯೂಆರ್‌ ಬಳಸದೆ, ಪ್ರಯಾಣಿಕರಿಂದ ಬರುವ ಹಣವನ್ನು ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್ ಮೂಲಕ ಸಂಗ್ರಹಿಸುತ್ತಿದ್ದರು.

ಅಮಾನತುಗೊಂಡ ಸಿಬ್ಬಂದಿ ಸುಮಾರು 1 ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ. ಸುರೇಶ್ ಎಂಬಾತ 47,257 ರೂ., ಮಂಚೇಗೌಡ 54,358 ರೂ. ಹಾಗೂ ಆಶ್ವಾಕ್ ಖಾನ್ 3,206 ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಆರೋಪಗಳು ವಿಚಾರಣೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Must Read