January21, 2026
Wednesday, January 21, 2026
spot_img

ರೋಹಿತ್-ವಿರಾಟ್‌ಗೆ ತಪ್ಪುತ್ತಾ ‘A+’ ಸ್ಥಾನ? BCCI ಹೊಸ ಒಪ್ಪಂದದಲ್ಲಿ ಭಾರಿ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸ್ತುತ ಬಿಸಿಸಿಐನ A+ ಗ್ರೇಡ್‌ನಲ್ಲಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಈ ಮೂವರೂ ಆಟಗಾರರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದರಿಂದ, ಅವರನ್ನು ಈ ಉನ್ನತ ಶ್ರೇಣಿಯಿಂದ ಕೈಬಿಡಲು ಬಿಸಿಸಿಐ ಚಿಂತನೆ ನಡೆಸಿದೆ. ಜಸ್‌ಪ್ರೀತ್ ಬುಮ್ರಾ ಮಾತ್ರ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವುದರಿಂದ ಅವರು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ, ಕೇವಲ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿರುವ ರೋಹಿತ್ ಮತ್ತು ವಿರಾಟ್ ಅವರನ್ನು ‘A’ ಗ್ರೇಡ್‌ಗೆ (5 ಕೋಟಿ ರೂ.) ಅಥವಾ ಅದಕ್ಕಿಂತ ಕೆಳಗೆ ಸೇರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಗಾಯದ ಸಮಸ್ಯೆಯಿಂದ ಹೊರಗಿರುವ ಮೊಹಮ್ಮದ್ ಶಮಿ ಅವರಿಗೂ ಈ ಬಾರಿ ಒಪ್ಪಂದದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.

ಪ್ರಸ್ತುತ ‘A’ ಶ್ರೇಣಿಯಲ್ಲಿರುವ ರಿಷಭ್ ಪಂತ್, ಶುಭ್​ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರಿಗೆ ಬಡ್ತಿ ಸಿಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಬಿಸಿಸಿಐ ಈ ಬಾರಿ ‘ಮೂರು ಮಾದರಿಯ ಕ್ರಿಕೆಟ್ ಆಡುವ ಆಟಗಾರರಿಗೆ ಆದ್ಯತೆ’ ಎಂಬ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ.

ಒಪ್ಪಂದದ ಪ್ರಸ್ತುತ ಸ್ಥಿತಿಗತಿ:

A+ ಗ್ರೇಡ್ (7 ಕೋಟಿ ರೂ.): 4 ಆಟಗಾರರು (ಬದಲಾವಣೆ ನಿರೀಕ್ಷಿತ).

A ಗ್ರೇಡ್ (5 ಕೋಟಿ ರೂ.): 6 ಆಟಗಾರರು (ಪಂತ್, ಗಿಲ್, ರಾಹುಲ್ ಸೇರಿದಂತೆ).

B ಮತ್ತು C ಗ್ರೇಡ್: ಒಟ್ಟು 24 ಆಟಗಾರರಿದ್ದು, ಇಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆಯಿದೆ.

Must Read