Money cant buy happiness! ಈ ಮಾತನ್ನು ಎಲ್ಲರೂ ಒಪ್ತೀರಾ? ಹಣದಿಂದ ಖುಷಿ ಖರೀದಿ ಮಾಡೋಕೆ ಆಗೋದಿಲ್ಲ. ಆದರೆ ಹಣ ಖರ್ಚು ಮಾಡಿ ಕುಡಿದ ಒಂದು ಬಿಸಿ ಬಿಸಿ ಕಾಫಿ ನಿಮ್ಮನ್ನು ರಿಲ್ಯಾಕ್ಸ್ ಮಾಡಿಸಬಹುದು.
ಗಂಟೆಗಟ್ಟಲೆ ಕಾದು ಸಿಟಿಬಸ್‌ನಲ್ಲಿ ನೇತಾಡಿಕೊಂಡು ಹೋದಾಗ ಜೀವನ ಪಾಠ ಕಲಿಯಬಹುದು, ಆದರೆ ಅದೇ ಹಣ ಖರ್ಚು ಮಾಡಿ ಕಾರ್ ಖರೀದಿ ಮಾಡಿ, ಎಸಿ ಆನ್ ಮಾಡಿಕೊಂಡು ಹೋಗುವಾಗ ಆಗೋ ಖುಷಿಯೇ ಬೇರೆ.
ಇದೇ ರೈಟ್ ಅಂತಲ್ಲ, ಎಲ್ಲವೂ ಅವರವರ ದೃಷ್ಠಿಕೋನಕ್ಕೆ ಬಿಟ್ಟದ್ದು. ದುಡ್ಡಿಂದ ಖುಷಿ ಪಡೆಯಬಹುದು, ಹೇಗೆ ನೋಡಿ..
ನಿಮ್ಮ ಸ್ನೇಹಿತರೋ ಅಥವಾ ಪ್ರೀತಿಪಾತ್ರರೋ ಎಷ್ಟೋ ಸಮಯದಿಂದ ವಷ್ತುವೊಂದನ್ನು ತೆಗೆದುಕೊಳ್ಳಬೇಕು ಎಂದುಕೊಂಡಿರುತ್ತಾರೆ. ಆದರೆ ನೀವು ಅವರಿಗೆ ಸರ್ಪ್ರೈಸ್ ರೂಪದಲ್ಲಿ ಅದನ್ನು ಕೊಡಿಸುತ್ತೀರಿ. ಅವರ ಮುಖದಲ್ಲಿ ಮೂಡಿದ ನಗು ಮರೆಯೋಕಾಗೋದಿಲ್ಲ. ಕೊಡಿಸಿದ ತೃಪ್ತಿ ನಿಮ್ಮಲ್ಲಿ ಇರುತ್ತದೆ. ಅಲ್ವಾ?
ಮನೆ ಬಾಡಿಗೆ, ಓಡಾಟದ ಖರ್ಚು, ದಿನಸಿ, ಹಣ್ಣು ತರಕಾರಿಗೆ ಹಣ ಈ ಎಲ್ಲದಕ್ಕೆ ಬೇಕಾಗುವ ಅಮೌಂಟ್ ನಿಮ್ಮ ಹತ್ತಿರ ಇದ್ರೆ ಒತ್ತಡ ನಿಮ್ಮ ಬಳಿ ಬರೋದಿಲ್ಲ.
ಜೀವನದ ಅನುಭವ ಪಡೆಯೋದು ತುಂಬಾ ಮುಖ್ಯ, ಯಾವುದೇ ಫಿಸಿಕಲ್ ಅನುಭವಗಳಿಗೆ ಹಣ ಅತ್ಯಗತ್ಯ, ಉದಾಹರಣೆಗೆ ನಿಮಗೆ ಕಾಶಿಗೆ ಹೋಗಬೇಕು ಅನ್ನೋ ಆಸೆ, ಆದರೆ ಹಣವಿಲ್ಲದೆ ಹೇಗೆ ಹೋಗ್ತೀರಿ? ಹಣ ಇದ್ದರೆ ನಿಮ್ಮಿಷ್ಟದ ಅನುಭವಗಳನ್ನು ಪಡೆಯಬಹುದು.
ಹಣ ಇದ್ದರೆ ಸಮಯ ಉಳಿಯುತ್ತದೆ. ಹೌದು, ಕೈಯಲ್ಲಿ ಎರಡು ಗಂಟೆ ಕೂತು ಬಟ್ಟೆ ಒಗೆಯೋ ಬದಲು, ಹಣ ವ್ಯಯಿಸಿ ವಾಶಿಂಗ್ ಮಶೀನ್ ತಂದರೆ ಮುಕ್ಕಾಲು ಗಂಟೆಗೆ ಅದೇ ಬಟ್ಟೆ ಒಗೆದುಬಿಡುತ್ತದೆ. ನಿಮಗೆ ಎರಡು ತಾಸು ಫ್ರೀ ಫ್ರೀ
ಆರೋಗ್ಯಕ್ಕಾಗಿ ಹಣ ಬೇಕು, ಉತ್ತಮ ಚಿಕಿತ್ಸೆ ಪಡೆಯಲು ಹಣ ಇರಲೇಬೇಕು. ಹಣ ಇದ್ದವರಿಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ. ನಿಮ್ಮಿಷ್ಟದಂತೆ ನಡೆದುಕೊಳ್ಳಲು ದಾರಿ ಇರುತ್ತದೆ.
ಹಣವೇ ಎಲ್ಲ ಅಲ್ಲ, ಹಣಕ್ಕಾಗಿ ಅಡ್ಡ ದಾರಿ ಹಿಡಿಯಬೇಕು ಅಥವಾ ಹಣದಿಂದಲೇ ಜನರನ್ನು ಅಳೆಯಬೇಕು ಎನ್ನುವುದು ಈ ಆರ್ಟಿಕಲ್‌ನ ಉದ್ದೇಶ ಅಲ್ಲ. ನ್ಯಾಯಯುತವಾಗಿ ದುಡಿದು, ಇರುವ ಹಣದಲ್ಲಿ ಯಾವೆಲ್ಲಾ ಕೆಲಸಗಳನ್ನು, ಅನುಭವಗಳನ್ನು ಪಡೆದುಕೊಳ್ಳಬಹುದು ನಮಗೆ ಬಿಟ್ಟಿದ್ದು!


