January21, 2026
Wednesday, January 21, 2026
spot_img

ಕರ್ನಾಟಕದಲ್ಲಿ SIR: ಬೂತ್ ಅಧಿಕಾರಿಗೆ ಮ್ಯಾಪಿಂಗ್‌ಗಾಗಿ ಈ ದಾಖಲೆಗಳನ್ನು ನೀಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಚುನಾವಣಾ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ, ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್‌ ಕಾರ್ಯ ಪ್ರಗತಿಯಲ್ಲಿದ್ದು, 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಈ ಕೆಳಕಂಡ ವಿವರಗಳನ್ನು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್‌ ಮಟ್ಟದ ಅಧಿಕಾರಿ ಅವರಿಗೆ ಮಾಹಿತಿಯನ್ನು ನೀಡಿ ಮ್ಯಾಪಿಂಗ್‌ ಮಾಡಿಕೊಳ್ಳಬೇಕು.

ಮ್ಯಾಪಿಂಗ್‌ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು. ಸಂತತಿ ಮ್ಯಾಪಿಂಗ್‌ ಅಂದರೆ, 2002ರ ಮತದಾರರ ಪಟ್ಟಿಯಲ್ಲಿಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ, ತಾಯಿ, ಅಜ್ಜ , ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಳ್ಳಬೇಕು.

2002ರ ಮತದಾರರಾಗಿದ್ದಲ್ಲಿ ನೀವು 2002ರಲ್ಲಿ ವಾಸವಿದ್ದಂತಹ ವಿಧಾನಸಭೆ ಕ್ಷೇತ್ರ ಹೆಸರು, ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್‌ ಮಟ್ಟದ ಅಧಿಕಾರಿ ಅವರಿಗೆ ಮತದಾರರು ಮಾಹಿತಿ ನೀಡಿ ಸಹಕರಿಸಬೇಕು. 2002ರ ಮತದಾರರ ಪಟ್ಟಿಯಲ್ಲಿನಿಮ್ಮ ಹೆಸರುಗಳನ್ನು ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್ ಮೂಲಕ ಪಡೆಯಬಹುದು. ನಿಮ್ಮ ಪ್ರಾಂತ್ಯದ ಬೂತ್ ಮಟ್ಟದ ಚುನಾವಣಾಧಿಕಾರಿಯ (ಬಿಎಲ್ಒ) ಸಂಪರ್ಕ ಸಂಖ್ಯೆಗಳೂ ಅಲ್ಲಿಯೇ ಸಿಗಲಿವೆ.

ಗುರುತು, ವಯಸ್ಸು ಮತ್ತು ನಿವಾಸವನ್ನು ಪರಿಶೀಲಿಸಲು ಭಾರತೀಯ ಚುನಾವಣಾ ಆಯೋಗವು ವಿವಿಧ ದಾಖಲೆಗಳನ್ನು ಸ್ವೀಕರಿಸುತ್ತದೆ. ಇವುಗಳಲ್ಲಿ ಕೇಂದ್ರ/ರಾಜ್ಯ ಸರ್ಕಾರ/PSU ನೌಕರರು/ಪಿಂಚಣಿದಾರರಿಂದ ಬಂದ ಗುರುತಿನ ಚೀಟಿಗಳು, ಜುಲೈ 1, 1987 ರ ಮೊದಲು ಸರ್ಕಾರ ನೀಡಿದ ಗುರುತಿನ ದಾಖಲೆಗಳು, ಜನನ ಪ್ರಮಾಣಪತ್ರಗಳು, ಭಾರತೀಯ ಪಾಸ್‌ಪೋರ್ಟ್‌ಗಳು, ಮೆಟ್ರಿಕ್ಯುಲೇಷನ್/ಶೈಕ್ಷಣಿಕ ಪ್ರಮಾಣಪತ್ರಗಳು, ಶಾಶ್ವತ ನಿವಾಸ ಪ್ರಮಾಣಪತ್ರಗಳು, ಅರಣ್ಯ ಹಕ್ಕು ಪ್ರಮಾಣಪತ್ರಗಳು, OBC/SC/ST ಅಥವಾ ಜಾತಿ ಪ್ರಮಾಣಪತ್ರಗಳು, ಎನ್.ಆರ್.ಸಿ. ದಾಖಲೆಗಳು (ಅನ್ವಯವಾಗುವಲ್ಲಿ), ಕುಟುಂಬ ನೋಂದಣಿಗಳು, ಭೂಮಿ ಅಥವಾ ಮನೆ ಹಂಚಿಕೆ ಪ್ರಮಾಣಪತ್ರಗಳು, ಆಧಾರ್ ಕಾರ್ಡ್‌ಗಳು (ಗುರುತಿನ/ಸಂಪರ್ಕಕ್ಕಾಗಿ) ಮತ್ತು ಬಿಹಾರ ಎಸ್ಐಆರ್ ಮತದಾರರ ಪಟ್ಟಿಯಿಂದ ಆಯ್ದ ಭಾಗಗಳು ಸೇರಿವೆ.

Must Read