January22, 2026
Thursday, January 22, 2026
spot_img

Rice series 93 | ಅನ್ನಕ್ಕೆ ಹೊಸ ಟ್ವಿಸ್ಟ್: ಯಮ್ಮಿ… ಸೋಯಾ ಮಂಚೂರಿಯನ್ ರೈಸ್

ಪ್ರತಿ ದಿನವೂ ಅದೇ ರುಚಿಯ ರೈಸ್ ತಿಂದು ಬೇಸತ್ತು ಹೋಗಿದ್ದರೆ, ಇವತ್ತು ಸ್ವಲ್ಪ ವಿಭಿನ್ನವಾದದ್ದನ್ನು ಟ್ರೈ ಮಾಡೋಣ. ಪ್ರೋಟೀನ್ ತುಂಬಿರುವ ಸೋಯಾ ಚಂಕ್ಸ್ ಮತ್ತು ಹೋಟೆಲ್ ಸ್ಟೈಲ್ ಮಂಚೂರಿಯನ್ ಫ್ಲೇವರ್ ಒಂದೇ ತಟ್ಟೆಯಲ್ಲಿ ಸೇರಿದಾಗ ಆಗುವ ರುಚಿಯೇ ಸೋಯಾ ಮಂಚೂರಿಯನ್ ರೈಸ್. ಕಡಿಮೆ ಸಾಮಗ್ರಿಗಳಲ್ಲಿ, ಕಡಿಮೆ ಸಮಯದಲ್ಲಿ ಪರ್ಫೆಕ್ಟ್ ಆಗಿ ತಯಾರಾಗುವ ಈ ರೈಸ್ ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡಬೇಕೆನಿಸುವುದು ಖಂಡಿತ.

ಬೇಕಾಗುವ ಸಾಮಗ್ರಿಗಳು:

ಸೋಯಾ ಚಂಕ್ಸ್ – 1 ಕಪ್
ಅನ್ನ – 2 ಕಪ್
ಈರುಳ್ಳಿ – 1
ಕ್ಯಾಪ್ಸಿಕಂ – ½ ಕಪ್
ಕ್ಯಾರೆಟ್ – ½ ಕಪ್
ಬೆಳ್ಳುಳ್ಳಿ – 1 ಟೀಸ್ಪೂನ್
ಶುಂಠಿ – 1 ಟೀಸ್ಪೂನ್
ಸೋಯಾ ಸಾಸ್ – 1½ ಟೇಬಲ್‌ಸ್ಪೂನ್
ಚಿಲ್ಲಿ ಸಾಸ್ – 1 ಟೇಬಲ್‌ಸ್ಪೂನ್
ಟೊಮೇಟೊ ಕೆಚಪ್ – 1 ಟೇಬಲ್‌ಸ್ಪೂನ್
ವಿನೆಗರ್ – ½ ಟೀಸ್ಪೂನ್
ಕಪ್ಪು ಮೆಣಸು ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್‌ಸ್ಪೂನ್
ಸ್ಪ್ರಿಂಗ್ ಅನಿಯನ್ – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲಿಗೆ ಸೋಯಾ ಚಂಕ್ಸ್ ಅನ್ನು ಬಿಸಿ ನೀರಿನಲ್ಲಿ 5 ನಿಮಿಷ ನೆನೆಸಿ, ನೀರು ಹಿಂಡಿ ಸ್ವಚ್ಛವಾಗಿ ಇಟ್ಟುಕೊಳ್ಳಿ.

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಸುಗಂಧ ಬರೋವರೆಗೆ ಹುರಿಯಿರಿ. ನಂತರ ಈರುಳ್ಳಿ ಹಾಕಿ ಸ್ವಲ್ಪ ಸಾಫ್ಟ್ ಆಗುವವರೆಗೆ ಬೇಯಿಸಿ.

ಕ್ಯಾರೆಟ್, ಕ್ಯಾಪ್ಸಿಕಂ ಸೇರಿಸಿ ಹೈ ಫ್ಲೇಮ್‌ನಲ್ಲಿ 2–3 ನಿಮಿಷ ಫ್ರೈ ಮಾಡಿ. ಕ್ರಂಚಿ ಟೆಕ್ಸ್ಚರ್ ಇರಲಿ.

ಈಗ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೇಟೊ ಕೆಚಪ್, ವಿನೆಗರ್, ಉಪ್ಪು ಮತ್ತು ಮೆಣಸು ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಸಿದ್ಧಪಡಿಸಿದ ಸೋಯಾ ಚಂಕ್ಸ್ ಸೇರಿಸಿ 2 ನಿಮಿಷ ಚೆನ್ನಾಗಿ ಟಾಸ್ ಮಾಡಿ.

ಕೊನೆಗೆ ಅನ್ನ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಅನ್ನ ತುಂಡಾಗದಂತೆ ಜಾಗ್ರತೆ ವಹಿಸಿ. ಕೊನೆಗೆ ಸ್ಪ್ರಿಂಗ್ ಅನಿಯನ್ ಹಾಕಿ ಗ್ಯಾಸ್ ಆಫ್ ಮಾಡಿ

Must Read