Monday, January 26, 2026
Monday, January 26, 2026
spot_img

ದಿನಭವಿಷ್ಯ: ಸಂಘರ್ಷ ಮರೆತು ಮುನ್ನಡೆಯಿರಿ, ಯಶಸ್ಸು ನಿಮ್ಮದಾಗಲಿದೆ!

ಮೇಷ
ನಕಾರಾತ್ಮಕ ಚಿಂತನೆ ಬಿಟ್ಟು ಪಾಸಿಟಿವ್ ಆಗಿ ಯೋಚಿಸಿ. ಅಸಾಧ್ಯದ ಕೆಲಸವೂ ನಿಮ್ಮಿಂದ ಸಾಧ್ಯ. ಕುಟುಂಬದ ಭಿನ್ನಮತ ನಿವಾರಿಸಿಕೊಳ್ಳಿ.
ವೃಷಭ
ಮನೆಯಲ್ಲಿ ತುರುಸಿನ ಬೆಳವಣಿಗೆ. ಟೀಕೆಗಳಿಗೆ ಹಿಂಜರಿಕೆ ಬೇಡ. ವೃತ್ತಿ ಒತ್ತಡಕ್ಕೆ ಮಣಿಯದಿರಿ, ಕೂಲ್ ಆಗಿ ಕಾರ್ಯ ನಿರ್ವಹಿಸಿ.
ಮಿಥುನ
ನಿಮಗೆ ಹಿತ ತಾರದ ಬೆಳವಣಿಗೆ ನಡೆದೀತು. ಹಿಂಜರಿಕೆ ಬೇಡ. ಅದರ ಪ್ರತಿಕೂಲ ಪರಿಣಾಮ ತಾಳಿಕೊಳ್ಳಬಲ್ಲಿರಿ. ಸಾಂಸಾರಿಕ ಸಮಾಧಾನ.
ಕಟಕ
ಕೆಲವರ ವರ್ತನೆ ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಭಾವನೆ ನಿಯಂತ್ರಣವೇ ಅದಕ್ಕೆ ಸೂಕ್ತ ಪರಿಹಾರ..
ಸಿಂಹ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ. ಇತರರ
ಮರುಳುಮಾತಿಗೆ ಮರುಳಾಗಬೇಡಿ.
ಕನ್ಯಾ
ವಿರೋಽಗಳು ಅಪಪ್ರಚಾರ ನಡೆಸ
ಬಹುದು. ಅದನ್ನು ಕಡೆಗಣಿಸಿ. ಸಮಾನ ಮನಸ್ಕರ ಸಂಗದಲ್ಲಿ ನೆಮ್ಮದಿ, ಆರ್ಥಿಕ ಉನ್ನತಿ.
ತುಲಾ
ಪ್ರಮುಖ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ಕಾಡುವ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ.
ವೃಶ್ಚಿಕ
ಆತ್ಮೀಯರ ಮಧ್ಯೆ ಭಿನ್ನಾಭಿಪ್ರಾಯ. ಅದು ಉಲ್ಬಣಗೊಳ್ಳಲು ಅವಕಾಶ ನೀಡದಿರಿ. ಬಿಗುಮಾನ ಬಿಡಿ. ಕಾರ್ಯದಲ್ಲಿ ವಿಳಂಬ, ಅಸಹನೆ.
ಧನು
ಎಲ್ಲರನ್ನು ಮೆಚ್ಚಿ ಸುವ ಪ್ರಯತ್ನ ಬಿಡಿ. ನಿಮ್ಮನ್ನು ಟೀಕಿಸುವವರನ್ನು ಕಡೆಗಣಿಸುವುದೇ ಒಳಿತು. ಆತ್ಮೀಯರ ಸಹಕಾರ ನಿಮಗಿದೆ.
ಮಕರ
ಹದಗೆಟ್ಟ ಸಂಬಂಧ ಸುಧಾರಣೆ. ಮನಸ್ತಾಪ ನಿವಾರಣೆ. ಆಹಾರ ಹಿತಮಿತವಿರಲಿ.ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು
ಕುಂಭ
ಇತರರನ್ನು ಟೀಕಿಸಲು ಹೋಗದಿರಿ. ನೀವು ಅವರಿಂದಲೇ ಟೀಕೆ ಕೇಳಬೇಕಾದೀತು. ಭವಿಷ್ಯದ ಕುರಿತಂತೆ ಚಿಂತೆ ಕಾಡಬಹುದು.
ಮೀನ
ಹಣದ ವ್ಯವಹಾರ ನಿಮಗೆ ಪೂರಕವಾಗಿ ಸಾಗುವುದು. ಆದರೆ ದೂರದಲ್ಲೆಲ್ಲೋ ಅನಿಶ್ಚಿತತೆಯ ಮೋಡ ಕವಿಯುತ್ತಿದೆ, ಎಚ್ಚರ.

Must Read