January22, 2026
Thursday, January 22, 2026
spot_img

ಒಂದೇ ಒಂದು ನೆಗೆಟಿವ್ ಕಮೆಂಟ್ ಇಲ್ಲ! ಕನ್ನಡಿಗರ ಪ್ರೀತಿಗೆ ‘ಗಿಲ್ಲಿ’ ನಟ ಭಾವುಕ ಕೃತಜ್ಞತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಸಿಗುತ್ತಿರುವ ಅಭೂತಪೂರ್ವ ಪ್ರೀತಿಯನ್ನು ಕಂಡು ಗಿಲ್ಲಿ ನಟ ಅಕ್ಷರಶಃ ದಿಗ್ಭ್ರಮೆಗೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ನನ್ನ ಮೇಲೆ ಇಷ್ಟೊಂದು ಪ್ರೀತಿ ಇದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಎಂದು ಸಂತಸ ಹಂಚಿಕೊಂಡಿದ್ದಾರೆ.

ಕೇವಲ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ವಿದೇಶಗಳಿಂದಲೂ ತಮಗೆ ಬೆಂಬಲ ಹರಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

View this post on Instagram

A post shared by Gilli Nata (@official_gilli_nata)

ಗಡಿಯಲ್ಲಿ ದೇಶ ಕಾಯುವ ಯೋಧರು ವಿಡಿಯೋ ಮಾಡುವ ಮೂಲಕ ತಮಗೆ ಶುಭ ಹಾರೈಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ರೈತರು ಹಸುಗಳ ಮೇಲೆ ಚಿತ್ರ ಬಿಡಿಸಿದ್ದು, ಆಟೋ ಚಾಲಕರು ಸ್ಟಿಕ್ಕರ್ ಹಾಕಿದ್ದು ಮತ್ತು ಕೆಲವರು ಅನಾಮಧೇಯರಾಗಿ ಮೈಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಪ್ರೀತಿಯನ್ನು ಅವರು ಸ್ಮರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಎಲ್ಲಿಯೂ ನೆಗೆಟಿವ್ ಮಾತುಗಳಾಗಲಿ ಅಥವಾ ಟ್ರೋಲ್‌ಗಳಾಗಲಿ ಬಾರದೆ ಇರುವುದು ತಮ್ಮ ಅದೃಷ್ಟ ಎಂದು ಅವರು ಹೇಳಿದ್ದಾರೆ.

“ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ನನ್ನನ್ನು ಮನೆ ಮಗನಂತೆ ಬೆಳೆಸಿದ್ದೀರಿ. ಈ ಪ್ರೀತಿಯನ್ನು ನಾನು ಕೊನೆಯವರೆಗೂ ಉಳಿಸಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.

Must Read