January22, 2026
Thursday, January 22, 2026
spot_img

CINE | ಜ.23ಕ್ಕೆ ಬಾಕ್ಸ್ ಆಫೀಸ್ ಕ್ಲ್ಯಾಶ್: ‘ಬಾರ್ಡರ್’ ಎದುರು ಬರ್ತಿದೆ ಕನ್ನಡದ ಎರಡು ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 23ರಂದು ಚಿತ್ರಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಹಬ್ಬ. ಬಾಲಿವುಡ್‌ನ ಬಹುನಿರೀಕ್ಷಿತ ‘ಬಾರ್ಡರ್-2’ ಬಿಡುಗಡೆಯಾಗುತ್ತಿರುವ ಅದೇ ದಿನ ಕನ್ನಡದಲ್ಲಿ ಎರಡು ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾಗಳು ತೆರೆಗೆ ಬರುತ್ತಿವೆ. ಯುದ್ಧಭೂಮಿ ಕಥೆಯೊಂದೆಡೆ, ಗ್ರಾಮೀಣ ಶೋಷಣೆಯ ಕಥೆ ಮತ್ತು ಬೋಲ್ಡ್ ಕಾನ್ಸೆಪ್ಟ್‌ನ ಮತ್ತೊಂದು ಚಿತ್ರ ಈ ಮೂರು ಸಿನಿಮಾಗಳ ಮಧ್ಯೆ ಪ್ರೇಕ್ಷಕ ಯಾರಿಗೆ ಜೈಕಾರ ಹಾಕುತ್ತಾನೆ ಅನ್ನೋದೇ ಕುತೂಹಲ ಮೂಡಿಸಿದೆ.

ಲ್ಯಾಂಡ್‌ಲಾರ್ಡ್
ನಿರ್ದೇಶಕ ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್‌ಲಾರ್ಡ್ ಚಿತ್ರದಲ್ಲಿ ಗ್ರಾಮೀಣ ಶೋಷಣೆಯ ಕಥೆಯನ್ನು ತೆರೆ ಮೇಲೆ ತರಲಾಗಿದೆ. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ‘ನಿಂಗವ್ವ’ ಪಾತ್ರದಲ್ಲಿ ಮಿಂಚಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದ ‘ನಿಂಗವ್ವ’ ಹಾಡು ಈಗಾಗಲೇ ವೈರಲ್ ಆಗಿದೆ.

ರಚಿತಾ ರಾಮ್ ಮತ್ತೊಂದು ಬೋಲ್ಡ್ ಚಿತ್ರ
ರಚಿತಾ ರಾಮ್ ಅಭಿನಯದ ಮತ್ತೊಂದು ಸಿನಿಮಾ ಕಲ್ಟ್ ಇದೇ ದಿನ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಝೈದ್ ಖಾನ್ ನಾಯಕನಾಗಿ ನಟಿಸಿದ್ದು, ಮಲೈಕಾ ವಸುಪಾಲ್ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಪಾತ್ರಗಳು ಮತ್ತು ವಿಭಿನ್ನ ಕಥಾಹಂದರ ಈ ಚಿತ್ರದ ಹೈಲೈಟ್.

ಬಾರ್ಡರ್-2: ಯುದ್ಧಭೂಮಿಯ ಗರ್ಜನೆ
ಸನ್ನಿ ಡಿಯೋಲ್, ವರುಣ್ ಧವನ್, ಆಹಾನ್ ಶೆಟ್ಟಿ ಮತ್ತು ದಿಲ್ಜಿತ್ ದೋಸಾಂಜ್ ಅಭಿನಯದ ಬಾರ್ಡರ್-2 ಚಿತ್ರ 1971ರ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯಲ್ಲಿದೆ. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ದೇಶಾದ್ಯಂತ ಭಾರೀ ನಿರೀಕ್ಷೆ ಇದೆ.

ಒಟ್ಟಿನಲ್ಲಿ, ಜನವರಿ 23ರಂದು ಬಾಕ್ಸ್‌ಆಫೀಸ್‌ನಲ್ಲಿ ಭಾರೀ ಪೈಪೋಟಿ ಆಗೋದಂತು ಖಚಿತ.

Must Read