Friday, January 23, 2026
Friday, January 23, 2026
spot_img

ಅಹಮದಾಬಾದ್ ವಿಮಾನ ದುರಂತ ಬಳಿಕ ಏರ್ ಇಂಡಿಯಾಗೆ 15 ಸಾವಿರ ಕೋಟಿ ನಷ್ಟ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ಅಹಮದಾಬಾದ್‌ನಲ್ಲಿನಡೆದ ವಿಮಾನ ದುರಂತದ ಬಳಿಕ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ಬರೋಬ್ಬರಿ 15,000 ಕೋಟಿ ರೂ. ನಷ್ಟವಾಗಿದೆ .

ಸುದ್ದಿಮಾಧ್ಯಮವೊಂದು ಈ ಕುರಿತು ವರಿದಿ ಮಾಡಿದ್ದು, 2025ರ ಜೂ.12ರಂದು ಗುಜರಾತ್‌ನ ಅಹಮದಾಬಾದ್ ಏರ್‌ಪೋರ್ಟ್ ಬಳಿ ವಿಮಾನ ದುರಂತ ಸಂಭವಿಸಿತ್ತು. ಈ ಘಟನೆ ಬಳಿಕ ವಿಮಾನ ಸಂಸ್ಥೆಗೆ ಆರ್ಥಿಕ ಹಿನ್ನಡೆ ಕಂಡಿದ್ದು, ಬರೋಬ್ಬರಿ 15,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.

ಭಾರತ-ಪಾಕ್ ನಡುವಿನ ಯುದ್ಧದ ಬಳಿಕ ಪಾಕ್ ವಾಯುವಲಯ ಬಂದ್ ಮಾಡಿದ್ದಕ್ಕಾಗಿ ಏರ್ ಇಂಡಿಯಾಗೆ ನಷ್ಟವಾಗಿತ್ತು. ಆ ನಂತರ ಅಹಮದಾಬಾದ್ ವಿಮಾನ ದುರಂತದ ಬಳಿಕ ಮತ್ತಷ್ಟು ಆರ್ಥಿಕವಾಗಿ ಕುಸಿತ ಕಂಡಿದೆ. ಇನ್ನೂ ಕಳೆದ 3 ವರ್ಷಗಳಲ್ಲಿ 32,210 ಕೋಟಿ ರೂ. ನಷ್ಟ ಅನುಭವಿಸಿದೆ.

Must Read