Friday, January 23, 2026
Friday, January 23, 2026
spot_img

ಸ್ವಲ್ಪ ತಿಳ್ಕೊಳಿ | ಏಷ್ಯಾದಲ್ಲಿ ಅತಿ ಹೆಚ್ಚು ಪಬ್‌ಗಳನ್ನು ಹೊಂದಿರುವ ನಗರ ಯಾವ್ದು ಗೊತ್ತಾ? ಅಂದಾಜಾಗಿರ್ಬೇಕಲ್ವಾ?

ಕೆಲಸ ಮುಗಿದ ನಂತರ ಸ್ನೇಹಿತರೊಂದಿಗೆ ಕುಳಿತು ಮಾತಾಡೋಕೆ, ಲೈವ್‌ ಮ್ಯೂಸಿಕ್‌ ಕೇಳೋಕೆ, ಕ್ಯಾಫೆ ವಾತಾವರಣ… ಈ ಚಿತ್ರಣ ಕೇಳಿದರೆ ತಕ್ಷಣ ನೆನಪಾಗೋದು ಒಂದೇ ನಗರ. ಹೌದು, ಏಷ್ಯಾದಲ್ಲಿ ಅತಿ ಹೆಚ್ಚು ಪಬ್‌ಗಳು ಮತ್ತು ಮೈಕ್ರೋ ಬ್ರೂವರಿಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ನಮ್ಮದೇ ಬೆಂಗಳೂರು.

ಐಟಿ ಹಬ್‌ ಆಗಿ ಗುರುತಿಸಿಕೊಂಡಿರುವ ಬೆಂಗಳೂರು, ಕೇವಲ ಟೆಕ್‌ ಸಿಟಿ ಮಾತ್ರವಲ್ಲ; ನೈಟ್‌ಲೈಫ್‌, ಫುಡ್‌ ಕಲ್ಚರ್‌ ಮತ್ತು ಪಬ್‌ ಸಂಸ್ಕೃತಿಗೂ ಪ್ರಸಿದ್ಧ. ಇಂದಿರಾನಗರ, ಕೊರಮಂಗಲ, ಎಂಜಿ ರೋಡ್‌, ವೈಟ್‌ಫೀಲ್ಡ್‌ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ನೂರಾರು ಪಬ್‌ಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲೇ ಮೊದಲ ಮೈಕ್ರೋ ಬ್ರೂವರಿಗಳು ಆರಂಭವಾದ ನಗರ ಎಂಬ ಹೆಸರನ್ನೂ ಬೆಂಗಳೂರು ಗಿಟ್ಟಿಸಿಕೊಂಡಿದೆ. ಸ್ಥಳೀಯವಾಗಿ ತಯಾರಾಗುವ ಕ್ರಾಫ್ಟ್‌ ಬಿಯರ್‌, ವಿಭಿನ್ನ ಥೀಮ್‌ ಪಬ್‌ಗಳು ಮತ್ತು ಲೈವ್‌ ಮ್ಯೂಸಿಕ್‌ ಸಂಸ್ಕೃತಿ ಬೆಂಗಳೂರಿನ ವೈಶಿಷ್ಟ್ಯ.

ಯುವಜನರ ಸಂಖ್ಯೆ ಹೆಚ್ಚಿರುವುದು, ಬಹುಸಾಂಸ್ಕೃತಿಕ ವಾತಾವರಣ ಮತ್ತು ಓಪನ್‌ ಮೈಂಡೆಡ್‌ ನಗರ ಜೀವನಶೈಲಿ ಈ ಎಲ್ಲ ಕಾರಣಗಳಿಂದಲೇ ಬೆಂಗಳೂರು ಏಷ್ಯಾದ ಪಬ್‌ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ‘ಪಬ್‌ ಸಿಟಿ ಆಫ್‌ ಏಷ್ಯಾ’ ಎಂದಾಗ ಮೊದಲಿಗೆ ಕೇಳಿಸೋ ಹೆಸರು ಒಂದೇ… ಅದು ನಮ್ಮ ಬೆಂಗಳೂರು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

Must Read