February 3, 2026
Tuesday, February 3, 2026
spot_img

ಪಕ್ಷದ ತಮ್ಮ‌ ಸ್ಥಾನಕ್ಕೆ ಗುಡ್ ಬೈ ಹೇಳಿದ ಸುಳ್ಯ ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ

ಹೊಸದಿಗಂತ ವರದಿ ಸುಳ್ಯ:

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷೆಯಾಗಿದ್ದ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಶನಿವಾರ ಸುದ್ದಿಗೋಷ್ಟಿಯಲ್ಲಿ ಪಕ್ಷದ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಮಾಹಿತಿಯನ್ನು ಪ್ರಕಟಿಸಿದರು.

ಅವರು ಶನಿವಾರ ಸುಳ್ಯ ಪ್ರಸೆಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿದ್ದು ಸುಧೀರ್ಘ 28 ವರ್ಗಳಲ್ಲಿ ಕೇವಲ ಎರಡು ಬಾರಿ ಪಕ್ಷದ ಒಳಗೆ ಬಿರುಕು ಮೂಡಿದ್ದು ಇದಕ್ಕೆ ಕೆಲ ಸ್ಥಳೀಯ ರಾಜಕಾರಣಿಗಳ ವಿಷಯವಾಗಿದೆ. ಗೂನಡ್ಕ ಮಸೀದಿ ವಿಚಾರದಲ್ಲಿ ಅಲ್ಲಿ ಅವರ ಧರ್ಮದವರ ಒಳಗಿನ ಜಗಳದಲ್ಲಿ ನನಗೆ ಅವರು ಈ ರೀತಿಯಲ್ಲಿ ಮಾಡಿದ್ದಾರೆ ಮುಂದೆ ಪಕ್ಷದ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಇರುವುದಿಲ್ಲ ಎಂದು ಹೇಳಿದರು.

ಸ್ವಾರ್ಥಕ್ಕೆ ರಾಜಕೀಯ ಮಾಡಿಕೊಂಡು ಬರುವುದು ಸರಿಯಲ್ಲ ಅಲ್ಲದೇ ನನ್ನ ರಾಜಿನಾಮೆಯನ್ನು ಒಕ್ಟೋಬರ್ 30 2025 ರಂದು ಸಲ್ಲಿಸಿದ್ದು ಇದೀಗ ಅದನ್ನು ಪ್ರಕಟಿಸುತ್ತಿದ್ದೇನೆ ಎಂದು ಹೇಳಿದರು. ಅಲ್ಲದೇ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿ ಆಗಿರಲಿಲ್ಲ ಆದರೆ ನಾಯಕರ ಒತ್ತಾಯಕ್ಕೆ ಒಪ್ಪಿಕೊಂಡಿದ್ದೆ ಎಂದು ಹೇಳಿದರು.ಇಲ್ಲಿಯ ತನಕ ತನ್ನ ತಂದೆಯ ಮತ್ತು ಕುಟುಂಬಕ್ಕೆ ಚ್ಯುತಿ ಬಾರದಂತೆ ರಾಜಕೀಯದಲ್ಲಿ ಕೆಲಸ ಮಾಡಿದ್ದು ತೃಪ್ತಿಯಿದೆ ಅಲ್ಲದೇ ಸಹಕಾರಿ ಸಂಘಕ್ಕೆ ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸುತ್ತೇನೆ ಎನ್ನುವವರು ತಕ್ಷಣವೇ ಸಲ್ಲಿಸಿ ಅದರಲ್ಲಿ ಒಂದು ರೂಪಾಯಿಗಳ ಅವ್ಯವಹಾರ ಅಥವ ಒಂದು ಕಪ್ ಚಾಹ ಇನ್ನೊಬ್ಬರದ್ದು ಕುಡಿದಿದ್ದರೂ ನನ್ನ ಪ್ರಾಥಮಿಕ ಕೃಷಿಪತ್ತಿನ ಸಹಾಕರಿ ಸಂಘದ ಅಧ್ಯಕ್ಷ ಸ್ಥಾನಕ್ಕು ರಾಜಿನಾಮೆ ಸಲ್ಲಿಸಲು ಸಿದ್ದವೆಂದು ಭಾರವಾದ ಹೃದಯದ ಮಾತುಗಳ ಮೂಲಕ ಹೇಳಿದರು.

ಸಹಾಕರಿ ಅಭಿವೃದ್ಧಿ ರಂಗದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯ

ಮುಂದೆ ಸಹಕಾರಿ ಕ್ಷೇತ್ರದಲ್ಲಿ ಈ ಹಿಂದಿನಂತೆ ಸಹಕಾರಿ ಅಭಿವೃದ್ಧಿ ರಂಗದ ಮೂಲಕ ಸ್ಪರ್ಧೆ ಮಾಡುತ್ತೇವೆ ಅಲ್ಲಿ ಬಿಜೆಪಿ ಪಕ್ಷದವರು ಇದ್ದಾರೆ ಇತರರು ಇದ್ದಾರೆ ನಮ್ಮದು ಸಹಕಾರಿ ಕ್ಷೇತ್ರದ ಅಭಿವೃದ್ಧಿ ಮಾತ್ರ ಮುಖ್ಯವಾಗಿದೆ ಎಂದು ಹೇಳಿದರು. ಅಲ್ಲದೇ ಇಂದು ನೇರ ನಡೆ ನಡೆಯ ರಾಜಕಾರಣಿಗಳು ಬೇಕಾಗಿಲ್ಲ ಅವರಿಗೆ ಸುಳ್ಳು ಭರವಸೆ ನೀಡುತ್ತ ಕುಣಿಯುವವರು ಬೇಕಾಗಿರುವುದು ಹಾಗಾಗಿ ಸಕ್ರಿಯ ರಾಜಕೀಯದಲ್ಲಿ ಇರುವುದಿಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !