Sunday, January 25, 2026
Sunday, January 25, 2026
spot_img

ರೈಸಿಂಗ್ ಸ್ಟಾರ್ಸ್ ಸಮರಕ್ಕೆ ಭಾರತ ಸಜ್ಜು: ಪಾಕ್ ವಿರುದ್ಧದ ಜಿದ್ದಾಜಿದ್ದಿಗೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ 2026ರ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ಗಾಗಿ ಬಿಸಿಸಿಐ ಭಾರತ ‘ಎ’ ತಂಡವನ್ನು ಪ್ರಕಟಿಸಿದೆ. ಫೆಬ್ರವರಿ 13 ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ಟೂರ್ನಿಗೆ ಅನುಭವಿ ಆಟಗಾರ್ತಿ ರಾಧಾ ಯಾದವ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ಯುವ ಪ್ರತಿಭೆಗಳ ಜೊತೆಗೆ ಸೀನಿಯರ್ ತಂಡದ ಆಟಗಾರ್ತಿಯರಾದ ತೇಜಲ್ ಹಸನ್ಬಿಸ್, ಮಿನ್ನು ಮಣಿ ಮತ್ತು ಸೈಮಾ ಠಾಕೋರ್ ಅವರಿಗೆ ಸ್ಥಾನ ನೀಡುವ ಮೂಲಕ ತಂಡವನ್ನು ಬಲಿಷ್ಠಗೊಳಿಸಲಾಗಿದೆ.

ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಇವುಗಳನ್ನು ‘ಎ’ ಮತ್ತು ‘ಬಿ’ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿರುವ ಭಾರತದ ಜೊತೆಗೆ ಪಾಕಿಸ್ತಾನ ಮಹಿಳಾ ‘ಎ’, ಯುಎಇ ಮತ್ತು ನೇಪಾಳ ತಂಡಗಳಿವೆ.

ಟೂರ್ನಮೆಂಟ್ ಫೆಬ್ರವರಿ 13 ರಿಂದ 22 ರವರೆಗೆ ನಡೆಯಲಿದ್ದು, ಒಟ್ಟು 15 ಪಂದ್ಯಗಳು ಜರುಗಲಿವೆ. ಭಾರತದ ಲೀಗ್ ಹಂತದ ಪಂದ್ಯಗಳು ಹೀಗಿವೆ:

ಫೆಬ್ರವರಿ 13: ಭಾರತ vs ಯುಎಇ

ಫೆಬ್ರವರಿ 15: ಭಾರತ vs ಪಾಕಿಸ್ತಾನ

ಫೆಬ್ರವರಿ 17: ಭಾರತ vs ನೇಪಾಳ

ಭಾರತ ‘ಎ’ ಫೈನಲ್ ತಂಡ:
ರಾಧಾ ಯಾದವ್ (ನಾಯಕಿ), ಹುಮೈರಾ ಕಾಜಿ, ವೃಂದಾ ದಿನೇಶ್, ಅನುಷ್ಕಾ ಶರ್ಮಾ, ದೀಯಾ ಯಾದವ್, ತೇಜಲ್ ಹಸಬ್ನಿಸ್, ನಂದನಿ ಕಶ್ಯಪ್ (ವಿಕೆಟ್ ಕೀಪರ್), ಮಮತಾ ಎಂ (ವಿಕೆಟ್ ಕೀಪರ್), ಸೋನಿಯಾ ಮೆಂಧಿಯಾ, ಮಿನ್ನು ಮಣಿ, ತನುಜಾ ಕನ್ವೆರ್, ಪ್ರೇಮಾ ರಾವತ್, ಸೈಮಾ ಠಾಕೋರ್, ಜಿಂತಾಮಣಿ ಕಲಿತಾ, ನಂದನಿ ಶರ್ಮಾ.

Must Read