ಇಂದಿನ ಸ್ಕಿನ್ ಕೇರ್ ಜಗತ್ತಿನಲ್ಲಿ ಎಷ್ಟೇ ದುಬಾರಿ ಕ್ರೀಮ್‌ಗಳು ಬಂದರೂ, ನಮ್ಮ ಅಜ್ಜಿಯರ ಕಾಲದಿಂದ ಬಳಕೆಯಲ್ಲಿರುವ ಕೆಲವು ನೈಸರ್ಗಿಕ ವಸ್ತುಗಳ ಮುಂದೆ ಅವೆಲ್ಲಾ ಮಂಕಾಗಿಬಿಡುತ್ತವೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲೋದು ಮುಲ್ತಾನಿಮಿಟ್ಟಿ. ಸಾಮಾನ್ಯ ಮಣ್ಣಿನಂತೆ ಕಾಣಿಸುವ ಈ ಪದಾರ್ಥ, ಸರಿಯಾಗಿ ಬಳಸಿದ್ರೆ ಮುಖದ ಕಾಂತಿ, ತಾಜಾತನ ಮತ್ತು ಸ್ವಚ್ಛತೆಗೆ ಅದ್ಭುತ ಕೆಲಸ ಮಾಡುತ್ತದೆ. ಹಾಗಾದ್ರೆ ಈ ಮುಲ್ತಾನಿಮಿಟ್ಟಿಯಲ್ಲಿ ಅಂಥ ವಿಶೇಷ ಏನಿದೆ?
- ಮುಲ್ತಾನಿಮಿಟ್ಟಿ ಚರ್ಮದೊಳಗೆ ಜಮೆಯಾಗಿರುವ ಧೂಳು, ಎಣ್ಣೆ ಮತ್ತು ಮಲಿನತೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಮುಖ ಸ್ವಚ್ಛವಾಗಿ ಕಾಣಿಸಿಕೊಂಡು, ತಕ್ಷಣ ಫ್ರೆಶ್ ಲುಕ್ ಕೊಡುತ್ತದೆ.
- ಆಯ್ಲಿ ಸ್ಕಿನ್ ಇರುವವರಿಗೆ ಇದು ವರದಾನ. ಮುಖದ ಮೇಲೆ ಹೆಚ್ಚಾಗಿ ಬರುತ್ತಿರುವ ಎಣ್ಣೆಯನ್ನು ಸಮತೋಲನಗೊಳಿಸಿ, ಮ್ಯಾಟ್ ಫಿನಿಷ್ ನೀಡುತ್ತದೆ.
- ನಿಯಮಿತ ಬಳಕೆಯಿಂದ ರಕ್ತಸಂಚಾರ ಉತ್ತಮವಾಗುತ್ತದೆ. ಅದರಿಂದ ಮುಖಕ್ಕೆ ನೈಸರ್ಗಿಕ ಹೊಳಪು ಬರುತ್ತದೆ, ಮುಖ ಫಳಫಳ ಅಂತ ಹೊಳೆಯೋಕೆ ಇದೇ ಕಾರಣ ನೋಡಿ.
- ಮುಲ್ತಾನಿಮಿಟ್ಟಿಯ ತಣ್ಣನೆಯ ಗುಣ ಮೊಡವೆಗಳ ಉರಿ ಕಡಿಮೆ ಮಾಡುತ್ತದೆ. ಜೊತೆಗೆ ಕಪ್ಪು ಕಲೆಗಳು ನಿಧಾನವಾಗಿ ಮಸುಕಾಗಲು ಸಹಾಯ ಮಾಡುತ್ತದೆ.
- ಬಿಸಿಲಿಗೆ ಕಪ್ಪಾಗಿರುವ ಚರ್ಮಕ್ಕೆ ಮುಲ್ತಾನಿಮಿಟ್ಟಿ ತಂಪು ನೀಡುತ್ತದೆ. ರೋಸ್ ವಾಟರ್ ಅಥವಾ ಹಾಲಿನ ಜೊತೆ ಬಳಿಸಿದರೆ ಟ್ಯಾನ್ ಕಡಿಮೆಯಾಗುತ್ತದೆ.
ಒಟ್ಟಿನಲ್ಲಿ, ಮುಲ್ತಾನಿಮಿಟ್ಟಿ ಎಂದರೆ ಕೇವಲ ಮಣ್ಣು ಅಲ್ಲ; ಅದು ಚರ್ಮಕ್ಕೆ ಹೊಸ ಜೀವ ತುಂಬುವ ನೈಸರ್ಗಿಕ ಸೌಂದರ್ಯ ರಹಸ್ಯ. ಸರಿಯಾದ ವಿಧಾನದಲ್ಲಿ ಬಳಸಿದರೆ, ದುಬಾರಿ ಫೇಶಿಯಲ್‌ಗಿಂತಲೂ ಉತ್ತಮ ಫಲಿತಾಂಶ ಕೊಡುತ್ತದೆ.



