Sunday, January 25, 2026
Sunday, January 25, 2026
spot_img

ವಿದೇಶದಲ್ಲಿ ನಮ್ಮ ದೇಶದ ವಿರುದ್ದ ನಾನು ಮಾತನಾಡಲ್ಲ: ಡಿಸಿಎಂ ಡಿಕೆ ಶಿವಕುಮಾರ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೇರೆ ದೇಶಕ್ಕೆ ಹೋಗಿ ನಮ್ಮ‌ ದೇಶದ ವಿರುದ್ದ ನಾನು ಮಾತನಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಭಾರತದ ಆರ್ಥಿಕತೆ ಸರಿ ಇಲ್ಲ ಎಂದು ಹೇಳುವಾಗ ನೀವು ಭಾರತವನ್ನು ಹೊಗಳಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್‌ ಗಾಂಧಿ ಯಾವ ಸನ್ನಿವೇಶದಲ್ಲಿ, ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಅವರು ದೇಶದ ವಿರುದ್ಧ ಹೇಳಿಕೆ ನೀಡಿಲ್ಲ. ಆಂತರಿಕ ವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ. ರಾಜಕೀಯಕ್ಕೆ ನಾನು ಭಾರತವನ್ನು ಬೈಯಲು ಸಾಧ್ಯವಿಲ್ಲ ಎಂದರು.

ನನಗೆ ಅಷ್ಟೋ ಇಷ್ಟೋ ರಾಜಕೀಯ ಅನುಭವ ಇದೆ. ಅದರ ಮೇಲೆ ಹೇಳಿದ್ದೇನೆ. ನಾನು ಯಾವುದೋ ದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಧಕ್ಕೆ ತರುವುದಕ್ಕೆ ಆಗುವುದಿಲ್ಲ. ನಾವು ನಮ್ಮ ದೇಶವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಮೊದಲು ನಾವು ಭಾರತೀಯರು. ನಾನು ದೇಶವನ್ನು ಪ್ರೀತಿಸುತ್ತೇನೆ ಗೌರವಿಸುತ್ತೇನೆ. ಭಾರತದ ಅಭಿವೃದ್ಧಿಗೆ ನಮ್ಮೆಲ್ಲರ ಕೊಡುಗೆ ಇದೆ. ನಾಳೆ ಭಾರತ 77ನೇ ಗಣರಾಜ್ಯೋತ್ಸವ ಆಚರಣೆ ನಡೆಸಲಿದೆ. ನಾವೆಲ್ಲರೂ ಸಂಭ್ರಮದಿಂದ ಆಚರಿಸೋಣ ಎಂದು ಹೇಳಿದರು.

Must Read