Sunday, January 25, 2026
Sunday, January 25, 2026
spot_img

ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗನ ಡೇಟಿಂಗ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಧನಶ್ರೀ ವರ್ಮಾ ಜೊತೆಗಿನ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದ ಮೇಲೆ ಆರ್‌ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದರು. ಇತ್ತೀತೆಗೆ ಇನ್‌ಫ್ಲುಯೆನ್ಸರ್, ರೇಡಿಯೋ ಜಾಕಿ ಮಹ್ವಾಶ್ ಅನ್‌ಫಾಲೋ ಮಾಡಿ ಸುದ್ದಿಯಾಗಿದ್ದ ಯಜುವೇಂದ್ರ ಚಹಾಲ್ ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಡಿನ್ನರ್ ಡೇಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ 13 ರ ಮಾಜಿ ಸ್ಪರ್ಧಿ ಶೆಫಾಲಿ ಬಗ್ಗಾ ಮುಂಬೈನಲ್ಲಿ ಜತೆಯಾಗಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದು, ಅವರ ಭೇಟಿಯ ಸ್ವರೂಪದ ಬಗ್ಗೆ ಹಲವರು ಊಹಾಪೋಹಗಳನ್ನು ವ್ಯಕ್ತಪಡಿಸಿದ್ದಾರೆ. ಇವರಿಬ್ಬರು ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಚಾಹಲ್ ಅವರ ವೈಯಕ್ತಿಕ ಸಂಬಂಧಗಳ ಊಹಾಪೋಹಗಳ ಮಧ್ಯೆ ಈ ಸಾರ್ವಜನಿಕ ಪ್ರದರ್ಶನವು ಗಮನಾರ್ಹವಾಗಿದೆ. ಭೋಜನದ ನಂತರ ಈ ಜೋಡಿ ಪ್ರತ್ಯೇಕವಾಗಿ ನಿರ್ಗಮಿಸುವುದು ಕಂಡುಬಂದಿತು.

Must Read