ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಜನ ನಾಯಗನ್’ ನಿಷೇಧ ಹಾಗೂ ಕರೂರು ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆ ನಡುವೆ ನಟ ವಿಜಯ್, ಯಾವುದೇ ಒತ್ತಡಕ್ಕೆ ಶರಣಾಗುವುದಿಲ್ಲ ಎಂದು ಬಲವಾದ ಸಂದೇಶ ರವಾನಿಸಿದ್ದಾರೆ.
ಮಾಮಲ್ಲಪುರಂನಲ್ಲಿ 3,000 ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದ ಕಾರ್ಯತಂತ್ರದ ಸಭೆಯಲ್ಲಿ ಗುಡುಗಿದ ಅವರು, ಇದು ಕೇವಲ ಚುನಾವಣೆಯಲ್ಲ, ಪ್ರಜಾಪ್ರಭುತ್ವಕ್ಕಾಗಿ ಸಮರ. ನೀವು ಈ ಯುದ್ಧವನ್ನು ಎದುರಿಸುವ ನನ್ನ ಕಮಾಂಡೋಗಳು.ರಾಜಕೀಯದಲ್ಲಿರುವವರು, ಪಕ್ಷದಲ್ಲಿ ಹೆಸರು ಇರುವವರ ಕೂಡಾ ಅಣ್ಣಾ ಅವರನ್ನು ಮರೆತಿದ್ದಾರೆ ಎಂದು ಹೇಳುವ ಮೂಲಕ ಡಿಎಂಕೆ ಮತ್ತು AIADMKಯನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದರು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ರಾಜಕೀಯದ ಪ್ರಮುಖ ಸಿದ್ಧಾಂತವಾದಿ ಸಿಎನ್ ಅಣ್ಣಾದೊರೈ ಅವರನ್ನು ಉಲ್ಲೇಖಿಸಿದರು.
ಮತಗಟ್ಟೆಗಳು ಅಧಿಕಾರದಲ್ಲಿರುವ ಪಕ್ಷಗಳಿಗೆ ಬೋಗಸ್ ಮತ ಕೇಂದ್ರಗಳಾಗಿವೆ. ಪ್ರತಿ ಮತವನ್ನು ರಕ್ಷಿಸಿ, ಎಲ್ಲರನ್ನು ಭೇಟಿ ಮಾಡಿ ;ದುಷ್ಟ ಶಕ್ತಿ’ (DMK) ಮತ್ತು ‘ಭ್ರಷ್ಟ ಶಕ್ತಿ’ (AIADMK) ಎದುರಿಸಲು ಟಿವಿಕೆಗೆ ಮಾತ್ರ ಧೈರ್ಯವಿದೆ. ನಾಳೆಯಿಂದ ರಾಜ್ಯಾದ್ಯಂತ ಪ್ರಚಾರ ಪ್ರವಾಸ ಆರಂಭಿಸಲಾಗುವುದು. ರಾಜ್ಯ ಚುನಾವಣೆಗೂ ಮುನ್ನಾ ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಬೆಂಬಲ ಸಂಗ್ರಹಿಸಲಿದೆ. ಟಿವಿಕೆ ಇನ್ನೂ ಯಾವುದೇ ಪಕ್ಷದೊಂದಿಗೆ ಮೈತ್ರಿ ಘೋಷಿಸಿಲ್ಲ. ಸ್ನೇಹಿತರಿಲ್ಲದೆ ಏಕಾಂಗಿಯಾಗಿ ಗೆಲ್ಲುತ್ತೇವೆ ಎಂದು ವಿಜಯ್ ಹೇಳಿದರು.




