Monday, January 26, 2026
Monday, January 26, 2026
spot_img

Gold Rate | ಗಗನಕ್ಕೇರಿದ ಹಳದಿ ಲೋಹ: ಲಕ್ಷದ ಗಡಿ ದಾಟಿ ಮುನ್ನುಗ್ಗುತ್ತಿರುವ ‘ಅಪರಂಜಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಕೈಗೆಟುಕದ ಮಟ್ಟಕ್ಕೆ ತಲುಪಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಪರಿಣಾಮವಾಗಿ ಭಾರತದಲ್ಲೂ ಹಳದಿ ಲೋಹದ ಬೆಲೆ ದಿನೇ ದಿನೇ ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ಭರ್ಜರಿ 1,62,710 ರೂಪಾಯಿ ತಲುಪಿದೆ. ಇನ್ನು ಆಭರಣ ತಯಾರಿಕೆಗೆ ಬಳಸುವ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,49,150 ರೂಪಾಯಿ ಆಗಿದ್ದು, ಶೀಘ್ರದಲ್ಲೇ 1.50 ಲಕ್ಷದ ಗಡಿ ದಾಟುವ ಮುನ್ಸೂಚನೆ ನೀಡಿದೆ.

ಬೆಳ್ಳಿಯ ಬೆಲೆಯೂ ಚಿನ್ನದ ಹಾದಿಯಲ್ಲೇ ಸಾಗುತ್ತಿದ್ದು, ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದೆ.

ಬೆಂಗಳೂರಿನಲ್ಲಿ: 100 ಗ್ರಾಂ ಬೆಳ್ಳಿಯ ಬೆಲೆ 34,000 ರೂಪಾಯಿ ಇದೆ.

ಚೆನ್ನೈ ಮತ್ತು ಕೇರಳದ ಭಾಗಗಳಲ್ಲಿ: ಬೆಳ್ಳಿ ಬೆಲೆ 100 ಗ್ರಾಂಗೆ 37,500 ರೂಪಾಯಿಗೆ ತಲುಪಿದ್ದು, ಒಂದು ಕಿಲೋ ಬೆಳ್ಳಿಯ ದರ 3,75,000 ರೂಪಾಯಿಗಳಷ್ಟು ದುಬಾರಿಯಾಗಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ಬೇಡಿಕೆ ಹೆಚ್ಚಿರುವುದರಿಂದ ಈ ಬೆಲೆ ಏರಿಕೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದು ಮದುವೆ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿದ್ದ ಕುಟುಂಬಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

Must Read