Monday, January 26, 2026
Monday, January 26, 2026
spot_img

ಸಿಎಂಗೆ ಸಂವಿಧಾನದ ಮೇಲೆ ವಿಶ್ವಾಸ ಇದ್ಯೋ ಇಲ್ವೋ ಗೊತ್ತಾಗ್ಬೇಕು: ಟೆಂಗಿನಕಾಯಿ ಆಗ್ರಹ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಾಂಗ್ರೆಸ್ ನಾಯಕರು ರಾಜ್ಯಪಾಲರ ಹುದ್ದೆ ಸಂವಿಧಾನಿಕ ಹುದ್ದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮೇಲೆ ವಿಶ್ವಾಸ ಇದೆಯೋ ಇಲ್ಲವೋ ಎಂಬುವುದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಜಂಟಿ ಅಽವೇಶನದಲ್ಲಿ ರಾಜ್ಯಪಾಲರು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಮೊದಲ ಹಾಗೂ ಕೊನೆಯ ಪುಟ ಓದಿದ್ದಾರೆ. ರಾಷ್ಟ್ರ ಗೀತೆ ಹಾಕುವ ಕೆಲಸ ಯಾರದ್ದು. ಇಂತಹ ಬೂಟಾಟಿಕೆಯನ್ನು ರಾಜ್ಯ ಸರ್ಕಾರ ಬಿಡಬೇಕು ಎಂದರು.

ಬಿಜಿ-ಜಿ ರಾಮ್ ಜಿ ಯೋಜನೆ ತಿದ್ದು ಪಡಿತಂದು ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಅನುಕೂಲ ಮಾಡಿದೆ. ಶೇ. ೬೦ ರಷ್ಟು ಕೇಂದ್ರ ಹಾಗೂ ಶೇ. ೪೦ ರಷ್ಟು ಅನುದಾನ ರಾಜ್ಯ ಸರ್ಕಾರ ನೀಡಬೇಕು. ಆದರೆ ರಾಜ್ಯ ಸರ್ಕಾರಕ್ಕೆ ಶೇ. ೪೦ ರಷ್ಟು ಕೊಡದಾಗದ ಕಾರಣ ಇದನ್ನು ವಿರೋಽಸುತ್ತಿದ್ದಾರೆ. ಇದಕ್ಕೆ ಸಿಎಂ ಹಾಗೂ ಶಾಸಕರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಮನೆ ಹಂಚಿಕೆ ಹಾಗೂ ಹಕ್ಕುಪತ್ರ ವಿತರಿಸಲು ನಮ್ಮ ಅಭ್ಯಂತರವಿಲ್ಲ. ಈ ಸಮಾರಂಭಕ್ಕೆ ಜನರ ಸೇರಿಸಲು ಮದ್ಯ ಹಂಚಲಾಗಿದ್ದು, ಇದರ ಅರ್ಥವೇನು? ೨ ಲಕ್ಷ ಜನರನ್ನು ಸೇರಿಸಲು ಮದ್ಯ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Must Read