Monday, January 26, 2026
Monday, January 26, 2026
spot_img

ಶೂಟ್‌ ಮಾಡ್ತೀನಿ ಎಂದು ಹೆದರಿಸಿ ಚಿನ್ನಾಭರಣ ಲೂಟಿ ಮಾಡಿದ ಖದೀಮರು

ಹೊಸದಿಗಂತ ವರದಿ ವಿಜಯಪುರ:

ಪಿಸ್ತೂಲ್‌ ತೋರಿಸಿ ಚಿನ್ನಾಭರಣ ಮಳಿಗೆಯಲ್ಲಿನ 20 ಗ್ರಾಮ್ ಚಿನ್ನಾಭರಣ ದರೋಡೆ ಮಾಡಿ ದುಷ್ಕರ್ಮಿಗಳಿಬ್ಬರು ಪರಾರಿ ಆಗಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಇಬ್ಬರು ಮುಸುಕುಧಾರಿಗಳು ಪಿಸ್ತೂಲ್‌ ತೋರಿಸಿ, ಚಿನ್ನಾಭರಣ ಮಳಿಗೆ ದರೋಡೆ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದರೋಡೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read