ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಲೈಫ್ ಸಾಹಸಿಗ ಅಲೆಕ್ಸ್ ಹೊನ್ನಾಲ್ಡ್ ತಮ್ಮ ಸಾಹಸದಿಂದ ಮತ್ತೆ ಪ್ರಪಂಚವನ್ನು ಅಚ್ಚರಿಗೊಳಿಸಿದ್ದಾರೆ. ತೈಪೆ 101 ಕಟ್ಟಡವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಏರಿದ ಅವರು, ತಮ್ಮ ಧೈರ್ಯ ಮತ್ತು ನಿಖರತೆಯಿಂದ ದಾಖಲೆ ಸೃಷ್ಟಿಸಿದ್ದಾರೆ. 508 ಮೀಟರ್ ಎತ್ತರದ ಐಕಾನಿಕ್ ಕಟ್ಟಡವನ್ನು ಹೊನ್ನಾಲ್ಡ್ ಸುತ್ತುತ್ತ, ಕೇವಲ 90 ನಿಮಿಷಗಳಲ್ಲಿ ಶಿಖರ ತಲುಪಿದ್ದಾರೆ.
ಕಟ್ಟಡದ ಆವರಣದಲ್ಲಿ ಭಾರೀ ಜನಸಮೂಹವು ಅವರ ಸಾಹಸವನ್ನು ನೇರವಾಗಿ ವೀಕ್ಷಿಸಲು ಸೇರಿದ್ದರು. L-ಆಕಾರದ ಸಣ್ಣ ಅಂಚುಗಳು, “ಬ್ಯಾಂಬೂ ಬಾಕ್ಸಸ್” ಎಂದು ಕರೆಯಲ್ಪಡುವ ಮಧ್ಯಮ ಮಹಡಿಗಳು ಎಲ್ಲಾ ಸವಾಲುಗಳನ್ನೂ ಹೊನ್ನಾಲ್ಡ್ ನಿರ್ಭಯವಾಗಿ ಹಿಮ್ಮೆಟ್ಟಿ ಕಟ್ಟಡ ಏರಿದ್ದಾರೆ. ಹೀಗಾಗಿ, ಅವರು ತೈಪೆ 101 ಶಿಖರವನ್ನು ಹಗ್ಗವಿಲ್ಲದೆ ಏರಿದ ಮೊದಲ ವ್ಯಕ್ತಿಯಾಗಿ ಇತಿಹಾಸ ಬರೆದರು.
ಕಟ್ಟಡ ಏರಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರು ಪ್ರತಿಷ್ಠಿತ ಸಾಹಸಿಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.



