Tuesday, January 27, 2026
Tuesday, January 27, 2026
spot_img

ಸಿಲಿಕಾನ್ ಸಿಟಿಯಲ್ಲಿ ಏರ್ ಕ್ವಾಲಿಟಿ ತುಸು ನಿರಾಳ: ಸುಧಾರಿಸಿದರೂ ದೂರವಾಗಿಲ್ಲ ಅಪಾಯದ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಒಂದು ವರ್ಷದಿಂದ ಸತತವಾಗಿ ಏರುಪೇರಾಗುತ್ತಿದ್ದ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಇಂದು ತುಸು ಸುಧಾರಣೆ ಕಂಡುಬಂದಿದೆ. ಕಳೆದ ಕೆಲ ತಿಂಗಳುಗಳ ಹಿಂದೆ 200ರ ಗಡಿ ದಾಟಿ ಆತಂಕ ಮೂಡಿಸಿದ್ದ ಮಾಲಿನ್ಯದ ಮಟ್ಟ, ಇಂದು 129ಕ್ಕೆ ಇಳಿಕೆಯಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿಯ ಗಾಳಿಯ ಗುಣಮಟ್ಟ ಇಂದು ಚೇತರಿಸಿಕೊಂಡಿರುವುದು ಸಮಾಧಾನಕರ ಸಂಗತಿ.

ಆದರೆ, ಈ ಸುಧಾರಣೆ ತಾತ್ಕಾಲಿಕವೇ ಹೊರತು ಸಂಪೂರ್ಣ ಸುರಕ್ಷಿತವಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ನಿಗದಿಪಡಿಸಿದ ಮಾನದಂಡಗಳಿಗಿಂತ ಈಗಲೂ ಬೆಂಗಳೂರಿನ ಗಾಳಿಯಲ್ಲಿನ ಸೂಕ್ಷ್ಮ ಕಣಗಳ ಪ್ರಮಾಣ 5 ಪಟ್ಟು ಹೆಚ್ಚಿದೆ. ಇದು ಸಾಮಾನ್ಯ ಸ್ಥಿತಿಗಿಂತ ಕಲುಷಿತವಾಗಿದ್ದು, ದೀರ್ಘಕಾಲದವರೆಗೆ ಇಂತಹ ಗಾಳಿಯನ್ನು ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಂಕಿ-ಅಂಶಗಳಲ್ಲಿ ಸಣ್ಣ ಮಟ್ಟದ ಇಳಿಕೆ ಕಂಡುಬಂದಿದ್ದರೂ, ಆರೋಗ್ಯದ ದೃಷ್ಟಿಯಿಂದ ಬೆಂಗಳೂರಿನ ವಾಯು ಗುಣಮಟ್ಟ ಇನ್ನೂ ‘ಕಳಪೆ’ ಹಂತದಲ್ಲೇ ಇದೆ. ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಉಸಿರಾಟದ ಸಮಸ್ಯೆ ಇರುವವರು ಹಾಗೂ ಮಕ್ಕಳು ಹೊರಗಡೆ ಓಡಾಡುವಾಗ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !