Saturday, December 20, 2025

ಯುಪಿಯ ಜಲಾಲಾಬಾದ್ ಇನ್ಮುಂದೆ ‘ಪರಶುರಾಮಪುರಿ’: ಕೇಂದ್ರ ಗೃಹ ಸಚಿವಾಲಯದಿಂದ ಸಿಕ್ಕಿತು ಸಮ್ಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಜಲಾಲಾಬಾದ್ ಹೆಸರನ್ನು ಬದಲಾಯಿಸಲು ಗೃಹ ಸಚಿವ ಅಮಿತ್ ಶಾ ಅನುಮೋದನೆ ನೀಡಿದ್ದಾರೆ .

ಹೀಗಾಗಿ ಜಲಾಲಾಬಾದ್ ಹೆಸರನ್ನು ಈಗ ಪರಶುರಾಮಪುರಿ ಎಂದು ಬದಲಾಯಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ”ಜಲಾಲಾಬಾದ್” ನಗರದ ಹೆಸರನ್ನು “ಪರಶುರಾಮಪುರಿ” ಎಂದು ಬದಲಾಯಿಸಲು ಭಾರತ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಲಾಗಿದೆ.

ಶಹಜಹಾನ್‌ಪುರ ಜಿಲ್ಲೆಯ ಜಲಾಲಾಬಾದ್ ಅನ್ನು ಪರಶುರಾಮಪುರಿ ಎಂದು ಮರುನಾಮಕರಣ ಮಾಡಲು ಗೃಹ ಸಚಿವಾಲಯ ಅನುಮೋದನೆ ನೀಡಿದ್ದಕ್ಕೆ ಕೇಂದ್ರ ಸಚಿವ ಮತ್ತು ಪಿಲಿಭಿತ್ ಸಂಸದ ಜಿತಿನ್ ಪ್ರಸಾದ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ ಪೋಸ್ಟ್ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಸನಾತನ ಸಮಾಜಕ್ಕೆ ಇದು ಹೆಮ್ಮೆಯ ಕ್ಷಣ ಎಂದು ಹೇಳಿದ ಜಿತಿನ್ ಪ್ರಸಾದ್, ಈ ನಿರ್ಧಾರವು ಭಗವಾನ್ ಪರಶುರಾಮನ ಭಕ್ತರಿಗೆ ಗೌರವ ಮತ್ತು ಸಂತೋಷವನ್ನು ತಂದಿದೆ ಎಂದು ಹೇಳಿದ್ದಾರೆ.

error: Content is protected !!